ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಇದುವರೆಗೆ ವೇಯ್ಟ್ ಲಿಫ್ಟಿಂಗ್ ಸೇರಿದಂತೆ ಇತರೆ ಸ್ಪರ್ಧೆಗಳಲ್ಲಿ ಪದಕಗಳನ್ನು ಗೆದ್ದಿದ್ದ ಭಾರತ, ಈಗ ಅಥ್ಲೆಟಿಕ್ಸ್ ವಿಭಾಗದಲ್ಲೂ ಖಾತೆ ತೆರೆದಿದ್ದು, ಹೈ ಜಂಪ್ ಫೈನಲ್ ನಲ್ಲಿ ಭಾರತದ ತೇಜಸ್ವಿನ್ ಶಂಕರ್ ಕಂಚಿನ ಪದಕ ಗಳಿಸಿದ್ದಾರೆ.
ರಾಷ್ಟ್ರೀಯ ದಾಖಲೆ ವೀರ ತೇಜಸ್ವಿನ್ ಶಂಕರ್ 2.22 ಮೀಟರ್ ಎತ್ತರ ಜಿಗಿಯುವ ಮೂಲಕ ಕಂಚಿನ ಪದಕ ವಿಜೇತರಾಗಿದ್ದು, 2.25 ಮೀಟರ್ ಎತ್ತರ ಜಿಗಿದ ನ್ಯೂಜಿಲೆಂಡ್ ನ ಹಮಿಶ್ ಕೆರ್ ಚಿನ್ನ ಹಾಗೂ ಆಸ್ಟ್ರೇಲಿಯಾದ ಬ್ರೆಂಡನ್ ಸ್ಪಾರ್ಕ್ ಬೆಳ್ಳಿ ಪದಕ ಪಡೆದಿದ್ದಾರೆ.
ಮಹತ್ವದ ಸಂಗತಿ ಎಂದರೆ ಕಳೆದ ಜೂನ್ ತಿಂಗಳಿನಲ್ಲಿ ಯುಜೀನ್ ನಲ್ಲಿ ನಡೆದಿದ್ದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ ನಲ್ಲಿ ತೇಜಸ್ವಿನ್ ಶಂಕರ್ 2.27 ಮೀಟರ್ ಎತ್ತರ ಜಿಗಿದಿದ್ದು, ಅದೇ ಪ್ರದರ್ಶನವನ್ನು ಕಾಮನ್ವೆಲ್ತ್ ಕ್ರೀಡಾಕೂಟದಲ್ಲೂ ನೀಡಿದ್ದರೆ ಚಿನ್ನದ ಪದಕ ಗೆಲ್ಲುತ್ತಿದ್ದರು.