ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ಪತಿ ಒಡೆತನದ ಕಂಪನಿಯು ಗೋವಾ ಬಾರ್ ನೊಂದಿಗೆ GST ಸಂಖ್ಯೆಯನ್ನು ಹಂಚಿಕೊಂಡಿದೆ ಎಂದು ಕಾಂಗ್ರೆಸ್ ನಾಯಕ ಹೇಳಿದ್ದಾರೆ. ಆದರೆ, ಬಿಜೆಪಿ ಹೇಳಿಕೆಯನ್ನು ತಳ್ಳಿಹಾಕಿದೆ.
ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ಪತಿ ಒಡೆತನದ ಕಂಪನಿಯು ಬಾರ್ ನೊಂದಿಗೆ ವಿಳಾಸವನ್ನು ಹಂಚಿಕೊಂಡಿದೆ ಎಂದು ಕಾಂಗ್ರೆಸ್ನ ಮಾಜಿ ಕಾರ್ಯದರ್ಶಿ ಗಿರೀಶ್ ಚೋಡಂಕರ್ ತಿಳಿಸಿದ್ದಾರೆ.
ಸ್ಮೃತಿ ಇರಾನಿ ಪತಿಯ ಕಂಪನಿ, ಸಿಲ್ಲಿ ಸೌಲ್ಸ್ ಬಾರ್ ಮತ್ತು ರೆಸ್ಟೋರೆಂಟ್ ಒಂದೇ ವಿಳಾಸದಿಂದ ಕಾರ್ಯನಿರ್ವಹಿಸುತ್ತವೆ. ಅಸ್ಸಾಗಾವೊ ವಿಳಾಸದಲ್ಲಿ ಇರಾನಿ ಕುಟುಂಬದ ಕಂಪನಿಗೆ ನೀಡಲಾದ ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ) ಸಂಖ್ಯೆಯು ಸಿಲ್ಲಿ ಸೋಲ್ಸ್ ಕೆಫೆ ಮತ್ತು ಬಾರ್ನ ಜಿಎಸ್ಟಿ ಸಂಖ್ಯೆಯಾಗಿದೆ. ಈ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಸ್ಮೃತಿ ಇರಾನಿ ಅವರನ್ನು ಸಂಪುಟದಿಂದ ಕೈಬಿಡಬೇಕು ಎಂದು ಎಂದು ಚೋಡಂಕರ್ ಹೇಳಿದ್ದಾರೆ.
ಗೋವಾದಲ್ಲಿ ಆಡಳಿತಾರೂಢ ಬಿಜೆಪಿಯು ಚೋಡಂಕರ್ ಅವರ ಹೇಳಿಕೆಯನ್ನು ತಳ್ಳಿಹಾಕಿದೆ.
ಉತ್ತರ ಗೋವಾದ ಅಸ್ಸಾಗಾವೊ ಗ್ರಾಮದಲ್ಲಿರುವ ವಿವಾದಿತ ಬಾರ್ ನೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ಸ್ಮೃತಿ ಇರಾನಿ ನಿರಾಕರಿಸಿದ್ದಾರೆ. ಸ್ಮೃತಿ ಇರಾನಿಯವರ 18 ವರ್ಷದ ಮಗಳು ಜೋಯಿಶ್ ಇರಾನಿ ಅವರು ಪ್ರಸಿದ್ಧ ಆಹಾರ ವಿಮರ್ಶಕ ಕುನಾಲ್ ವಿಜಯಕರ್ ಅವರಿಗೆ ನೀಡಿದ ಟಿವಿ ಸಂದರ್ಶನವನ್ನು ಚೋಡಂಕರ್ ಉಲ್ಲೇಖಿಸಿದ್ದಾರೆ. ಸಂದರ್ಶನದಲ್ಲಿ, ಸಿಲ್ಲಿ ಸೌಲ್ಸ್ ರೆಸ್ಟೋರೆಂಟ್ ಅವಳದೇ ಎಂದು ವಿಜಯಕರ್ ಅವರನ್ನು ಕೇಳಿದಾಗ ಜೋಯಿಶ್ ಒಪ್ಪಿಗೆ ಸೂಚಿಸುತ್ತಾರೆ.