ಮನೆಯಲ್ಲಿ ಸಾಕುಪ್ರಾಣಿಗಳಿವೆ ಎಂದು ಯಾರಾದರೂ ಹೇಳಿದಾಗ, ಹೆಚ್ಚಾಗಿ ಎಲ್ಲರಿಗೂ ನಾಯಿಯೋ ಅಥವಾ ಬೆಕ್ಕು ಇರಬಹುದು ಅಂತಾ ಅನಿಸೋದು ಸಹಜ. ಕೆಲವರು ಹಾವುಗಳಂತಹ ಸರೀಸೃಪಗಳನ್ನು ಕೂಡ ಸಾಕುತ್ತಾರೆ. ಆದರೆ, ಮನೆಯಲ್ಲಿ ಯಾರಾದರೂ ಮೊಸಳೆಯನ್ನು ಸಾಕುವುದನ್ನು ನೀವು ಎಂದಾದ್ರೂ ನೋಡಿದ್ದೀರಾ? ಆದರೆ, ಇಲ್ಲೊಬ್ಬನ ಕಥೆ ಕೇಳಿದ್ರೆ ಬೆಚ್ಚಿಬೀಳ್ತೀರಾ..!
ಟ್ವಿಟ್ಟರ್ನಲ್ಲಿ ದ ಫಿಗೆನ್ ಎಂಬ ಪುಟವು ವಿಡಿಯೋವನ್ನು ಹಂಚಿಕೊಂಡಿದೆ. ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಮೊಸಳೆಗೆ ಆಹಾರ ನೀಡುತ್ತಿರುವ ದೃಶ್ಯವನ್ನು ತೋರಿಸಲಾಗಿದೆ. ವ್ಯಕ್ತಿಯು ತನ್ನ ಮೊಣಕಾಲುಗಳ ಮೇಲೆ ಕುಳಿತುಕೊಳ್ಳುವ ಸರೀಸೃಪಕ್ಕೆ ನಿರ್ಭಯವಾಗಿ ಆಹಾರ ನೀಡಿದ್ದಾನೆ. ಮೊಸಳೆ ಕೂಡ ಆಕ್ರಮಣಕಾರಿಯಾಗದೆ ಆತನ ಜೊತೆ ಸ್ನೇಹಜೀವಿಯಾಗಿ ವರ್ತಿಸಿದೆ. ಆತ ತಿನ್ನಲು ಕೊಡುವುದನ್ನು ಹಾರುತ್ತಾ ತನಗೆ ಕೊಡಬೇಕು ಎನ್ನುವಂತೆ ತಿಂದಿದೆ.
ಈ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದ್ದು, 3.8 ಮಿಲಿಯನ್ ವೀಕ್ಷಣೆಗಳನ್ನು ಮತ್ತು ಟನ್ಗಳಷ್ಟು ಪ್ರತಿಕ್ರಿಯೆಗಳನ್ನು ಗಳಿಸಿದೆ. ವಿಡಿಯೋ ನೋಡಿದ ಜನರು ಬೆಚ್ಚಿಬೀಳುವುದರ ಜೊತೆಗೆ ಆತಂಕಕ್ಕೂ ಒಳಗಾಗಿದ್ದರು. ಇದು ಎಷ್ಟು ಅಪಾಯಕಾರಿ ಎಂದು ಹಲವರು ಹೇಳಿದ್ದಾರೆ.