ನವದೆಹಲಿ: 2024ರ ವೇಳೆಗೆ ಭಾರತವು ಅಮೆರಿಕದಂತಹ ರಸ್ತೆ ಮೂಲಸೌಕರ್ಯ ಹೊಂದಲಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ರಾಜ್ಯಸಭೆಯಲ್ಲಿ ಹೇಳಿದ್ದಾರೆ.
ಸದೃಢವಾದ ರಸ್ತೆ ಮೂಲಸೌಕರ್ಯವನ್ನು ರಚಿಸಲು ದೇಶದ ವಿವಿಧ ಭಾಗಗಳನ್ನು ಸಂಪರ್ಕಿಸುವ ಇಪ್ಪತ್ತಾರು ಹಸಿರು ಹೆದ್ದಾರಿಗಳನ್ನು ನಿರ್ಮಿಸಲಾಗುತ್ತಿದೆ ಎಂದು ಅವರು ಇಂದು ಪ್ರಶ್ನೋತ್ತರ ವೇಳೆಯಲ್ಲಿ ತಿಳಿಸಿದ್ದಾರೆ.
ರಾಜ್ಯಸಭೆಯಲ್ಲಿ ಸಪ್ಲಿಮೆಂಟರಿಗಳಿಗೆ ಉತ್ತರಿಸಿದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ಹಸಿರು ಹೆದ್ದಾರಿಗಳು ದೆಹಲಿಯಿಂದ ಜೈಪುರ್, ಚಂಡೀಗಢ, ಹರಿದ್ವಾರ, ಅಮೃತಸರ, ಮುಂಬೈ, ಕತ್ರಾ, ಶ್ರೀನಗರ ಮತ್ತು ಇತರ ನಗರಗಳಿಗೆ ವಾರಣಾಸಿ ಮತ್ತು ಕೋಲ್ಕತ್ತಾಗೆ ಸಂಪರ್ಕ ಕಲ್ಪಿಸಲಿವೆ. ಹಸಿರು ಹೆದ್ದಾರಿಗಳು ಪೂರ್ಣಗೊಂಡ ನಂತರ, ಪ್ರಯಾಣದ ಸಮಯ ಗಣನೀಯವಾಗಿ ಕಡಿಮೆಯಾಗುತ್ತದೆ. ದೇಶದಲ್ಲಿ ರಸ್ತೆ ಮೂಲಸೌಕರ್ಯ ನಿರ್ಮಾಣಕ್ಕೆ ಹಣದ ಕೊರತೆ ಇಲ್ಲ ಎಂದು ತಿಳಿಸಿದ್ದಾರೆ.