ಭಾರತದಲ್ಲಿ ಲೈಂಗಿಕತೆ ಬಗ್ಗೆ ಬಹಿರಂಗವಾಗಿ ಮಾತನಾಡುವುದಿಲ್ಲ. ಇದ್ರ ಬಗ್ಗೆ ಮಕ್ಕಳಿಗೆ ಸರಿಯಾಗಿ ಮಾಹಿತಿ ನೀಡಲು ಪೋಷಕರು ಹಿಂಜರಿಯುತ್ತಾರೆ. ಕೆಲ ಮಕ್ಕಳು ಪೋಷಕರ ಬಳಿ ಈ ಬಗ್ಗೆ ಪ್ರಶ್ನೆ ಕೇಳ್ತಾರೆ. ಆಗ ಪಾಲಕರು ತಬ್ಬಿಬ್ಬಾಗುವ ಜೊತೆಗೆ ಅವ್ರಿಗೆ ಉತ್ತರ ನೀಡಲು ಮನಸ್ಸು ಮಾಡುವುದಿಲ್ಲ. ಆದ್ರೆ ಮಕ್ಕಳಿಗೆ ಇದ್ರ ಬಗ್ಗೆ ಜ್ಞಾನ ನೀಡುವುದು ಅನಿವಾರ್ಯ.
ಮಕ್ಕಳು ನಾಲ್ಕನೇ ವಯಸ್ಸಿನಲ್ಲಿರುವಾಗ ಅವ್ರಿಗೆ ಖಾಸಗಿ ಅಂಗದ ಬಗ್ಗೆ ಮಾಹಿತಿ ನೀಡಬೇಕು. ಮಕ್ಕಳು ಎಲ್ಲಿಂದ ಬಂದ್ರು ಎಂಬುದನ್ನು ಹೇಳಬೇಕು. ಜನಿಸುವ ಮೊದಲು ತಾಯಿ ಹೊಟ್ಟೆಯಲ್ಲಿದ್ದೆ ಎಂಬುದನ್ನು ಆಟದ ಜೊತೆಯೇ ತಿಳಿಸಬೇಕು.
ಎಂಟನೇ ವಯಸ್ಸಿನಲ್ಲಿ ಮಕ್ಕಳು ಸ್ವಲ್ಪ ಅರ್ಥ ಮಾಡಿಕೊಳ್ತಾರೆ. ಆಗ ಮಕ್ಕಳಿಗೆ ಜನನದ ಬಗ್ಗೆ ನೀವು ಮಾಹಿತಿ ನೀಡಬಹುದು. ತಂದೆ ದೇಹದಲ್ಲಿರುವ ವೀರ್ಯ ತಾಯಿ ಹೊಟ್ಟೆ ಸೇರಿ ಅಲ್ಲಿ ಮಗು ಜನಿಸುತ್ತದೆ ಎಂಬುದನ್ನು ಹೇಳಬೇಕು.
ಹತ್ತನೇ ವಯಸ್ಸಿನಲ್ಲಿ ಮಗುವಿನೊಂದಿಗೆ ಲೈಂಗಿಕತೆಯ ಬಗ್ಗೆ ಹೆಚ್ಚು ಮುಕ್ತವಾಗಿ ಮಾತನಾಡಬಹುದು. ಅತ್ಯಾಚಾರದ ಬಗ್ಗೆ ಕೆಲವು ಸುದ್ದಿಗಳು ಬಂದರೆ ಅದರ ಬಗ್ಗೆಯೂ ಹೇಳಿ. ಮಕ್ಕಳು ಈ ಬಗ್ಗೆ ತಿಳಿಯಲು ಬಹಳ ಉತ್ಸುಕರಾಗಿರುತ್ತಾರೆ. ಹಾಗಾಗಿ ಮಕ್ಕಳಿಗೆ ವಿಷ್ಯವನ್ನು ಸರಿಯಾಗಿ ಹೇಳಿ.
15 ವರ್ಷ ವಯಸ್ಸಿನ ಮಕ್ಕಳು ಸಂವೇದನಾಶೀಲರಾಗುತ್ತಾರೆ. ಲೈಂಗಿಕತೆಯ ಬಗ್ಗೆ ತಮ್ಮದೇ ಆದ ಕಲ್ಪನೆಯನ್ನು ರೂಪಿಸುತ್ತಾರೆ. ಮಕ್ಕಳಿಗೆ ಸರಿಯಾದ ನಿರ್ದೇಶನವನ್ನು ನೀಡಬೇಕು. ಸಂಭೋಗದ ಬಗ್ಗೆ ಮತ್ತು ಯಾವ ವಯಸ್ಸಿನಲ್ಲಿ ಎಂಬ ಬಗ್ಗೆ ಮಾಹಿತಿ ನೀಡಬೇಕು.