ದಾವಣಗೆರೆಯಲ್ಲಿ ನಡೆಯುತ್ತಿರುವ ಸಿದ್ದರಾಮಯ್ಯನವರ 75ನೇ ವರ್ಷದ ಹುಟ್ಟುಹಬ್ಬಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಅವರ ಅಭಿಮಾನಿಗಳು ಆಗಮಿಸಿದ್ದು, ಇಡೀ ನಗರ ಈಗ ಸಿದ್ದರಾಮಯ್ಯ ಮಯವಾಗಿದೆ.
ಇದರ ಮಧ್ಯೆ ಅವರ ರಾಯಚೂರಿನ ಅಭಿಮಾನಿ ಆಂಜನೇಯ ಎಂಬವರು ಈ ಕುರಿಮರಿಯನ್ನು ಹೊತ್ತು ತಂದಿದ್ದು ಇದಕ್ಕೆ ಸಿದ್ದರಾಜು ಎಂದು ನಾಮಕರಣ ಮಾಡಿದ್ದಾರೆ. ಇದನ್ನು ಸಿದ್ದರಾಮಯ್ಯನವರಿಗೆ ಉಡುಗೊರೆಯಾಗಿ ನೀಡುವ ಉದ್ದೇಶವನ್ನು ಅವರು ಹೊಂದಿದ್ದಾರೆ. ಕುರಿಮರಿಯನ್ನು ಹಿಡಿದುಕೊಂಡು ಬಂದಿದ್ದು ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದಾರೆ. ಅಲ್ಲದೆ ಬಹಳಷ್ಟು ಮಂದಿ ಕರಿ ಕಂಬಳಿಯನ್ನು ಹೊದ್ದು, ಕೆಲವರು ಇದನ್ನು ವಿಜಯದ ಪತಾಕೆಯಂತೆ ಬೀಸುತ್ತಿದ್ದಾರೆ.
ಹುಲಿ ವೇಷ, ವೀರ ಕುಣಿತ ಸೇರಿದಂತೆ ಹಲವಾರು ಸಾಂಸ್ಕೃತಿಕ ಕಲಾ ತಂಡಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸುತ್ತಿವೆ. ಸಿದ್ದರಾಮಯ್ಯನವರ ಹುಟ್ಟುಹಬ್ಬದ ಸಂದರ್ಭದಲ್ಲಿ ಹೊರತಂದಿರುವ ಸಂಗೀತ ಆಲ್ಬಮ್ ಗೀತೆಗಳು ವೇದಿಕೆ ಸ್ಥಳದಲ್ಲಿ ಮೊಳಗುತ್ತಿವೆ.