ಕನೌಜ್: ದಿನಗೂಲಿ ಕಾರ್ಮಿಕರೊಬ್ಬರು ಕೆಲವು ಗಂಟೆಗಳ ಕಾಲ ‘ಕೋಟ್ಯಾಧಿಪತಿ’ಯಾದ ಘಟನೆ ನಡೆದಿದೆ. 100 ರೂ. ವಿತ್ ಡ್ರಾ ಮಾಡಲು ಹೋದ ಯುಪಿ ಕಾರ್ಮಿಕ ಬ್ಯಾಂಕ್ ಖಾತೆಯಲ್ಲಿ 2,700 ಕೋಟಿ ರೂ. ಕಂಡು ಬೆಚ್ಚಿಬಿದ್ದಿದ್ದಾನೆ.
45 ವರ್ಷದ ಬಿಹಾರಿ ಲಾಲ್ ಅವರು ತಮ್ಮ ಖಾತೆಯಲ್ಲಿ 2,700 ಕೋಟಿ ರೂ.ಗಳ ಬಾಕಿ ಇರುವ SMS ಅನ್ನು ಸ್ವೀಕರಿಸಿದ್ದಾರೆ. ತಮ್ಮ ಜನ್ ಧನ್ ಖಾತೆಯಿಂದ 100 ರೂ.ಗಳನ್ನು ಹಿಂತೆಗೆದುಕೊಂಡ ನಂತರ ಅವರಿಗೆ ಅಚ್ಚರಿಯಾಗಿದೆ. ಖಾತೆಯಲ್ಲಿ 2700 ಕೋಟಿ ಇರುವುದಾಗಿ ಮೆಸೇಜ್ ಬಂದಿದೆ.
ಬಿಹಾರಿ ಲಾಲ್ ರಾಜಸ್ಥಾನದ ಇಟ್ಟಿಗೆ ಭಟ್ಟಿಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದು, ಇಟ್ಟಿಗೆ ಗೂಡು ಘಟಕ ಮುಚ್ಚಿದ್ದರಿಂದ ಅವರು ಉತ್ತರ ಪ್ರದೇಶದ ಕನೌಜ್ ಜಿಲ್ಲೆಯ ತಮ್ಮ ಸ್ವಗ್ರಾಮದಲ್ಲಿದ್ದರು. ದಿನಕ್ಕೆ 600 ರಿಂದ 800 ರೂ. ಅವರಿಗೆ ಸಿಗುತ್ತಿತ್ತು. ಬಿಹಾರಿ ಲಾಲ್ ಬ್ಯಾಂಕ್ ಮಿತ್ರರ ಬಳಿಗೆ ಹೋಗಿ, ಖಾತೆ ಪರಿಶೀಲಿಸಿ ಖಾತೆಯಲ್ಲಿನ ಮೊತ್ತವನ್ನು ಖಚಿತಪಡಿಸಿಕೊಂಡಿದ್ದಾರೆ.
ಖಾತೆಯನ್ನು ಮೂರು ಬಾರಿ ಪರಿಶೀಲಿಸಲು ಬ್ಯಾಂಕ್ ಅಧಿಕಾರಿಯನ್ನು ಕೇಳಿದ್ದೆ. ನನಗೆ ನಂಬಲು ಸಾಧ್ಯವಾಗಲಿಲ್ಲ. ಬ್ಯಾಂಕ್ ಸ್ಟೇಟ್ಮೆಂಟ್ ತೆಗೆದು ನನಗೆ ನೀಡಿದರು. ನನ್ನ ಖಾತೆಯಲ್ಲಿ 2,700 ಕೋಟಿ ರೂಪಾಯಿ ಜಮಾ ಆಗಿರುವುದನ್ನು ನಾನು ನೋಡಿದೆ ಎಂದು ಬಿಹಾರಿ ಲಾಲ್ ಹೇಳಿದರು.
ಅವರ ಸಂತೋಷ ಅಲ್ಪಾವಧಿಯದ್ದಾಗಿತ್ತು. ಅವರು ತಮ್ಮ ಖಾತೆಯನ್ನು ಪರಿಶೀಲಿಸಲು ಶಾಖೆಗೆ ಬಂದಾಗ ಬಾಕಿ ಕೇವಲ 126 ರೂ. ಎಂದು ಅವರಿಗೆ ತಿಳಿಸಲಾಯಿತು. ಬ್ಯಾಂಕ್ ನ ಲೀಡ್ ಡಿಸ್ಟ್ರಿಕ್ಟ್ ಮ್ಯಾನೇಜರ್ ಅಭಿಷೇಕ್ ಸಿನ್ಹಾ ಅವರು ಖಾತೆಯ ಬಗ್ಗೆ ತನಿಖೆ ನಡೆಸಲಾಯಿತು. ಇದು ಮೇಲ್ನೋಟಕ್ಕೆ ಬ್ಯಾಂಕಿಂಗ್ ದೋಷವಾಗಿರಬಹುದು. ಬಿಹಾರಿ ಲಾಲ್ ಅವರ ಖಾತೆಯನ್ನು ಸ್ವಲ್ಪ ಸಮಯದವರೆಗೆ ನಿರ್ಬಂಧಿಸಲಾಗಿದೆ. ಹಿರಿಯ ಬ್ಯಾಂಕ್ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಅವರು ಹೇಳಿದರು.