ಮಂಗಳವಾರದಂದು ನಡೆದ ನಾಗರಪಂಚಮಿ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕು ಮೈದೊಳಿನಲ್ಲಿ ಹನುಮಂತ ದೇವರ ಕಾರ್ಣಿಕ ನಡೆದಿದ್ದು, ಈ ಸಂದರ್ಭದಲ್ಲಿ ‘ಆಕಾಶ ಏರಿತು – ವಜ್ರ ಅರಳಿತು ಎಚ್ಚರ’ ಎಂಬ ಕಾರ್ಣಿಕ ಹೊರ ಬಿದ್ದಿದೆ.
ಪ್ರತಿ ವರ್ಷ ನಾಗರ ಪಂಚಮಿ ದಿನದಂದು ಈ ಗ್ರಾಮದಲ್ಲಿ ಹನುಮಂತ ದೇವರ ಕಾರ್ಣಿಕ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ಮಳೆ, ಬೆಳೆ ಕುರಿತು ಕಾರ್ಣಿಕ ನುಡಿಯಲಾಗುತ್ತದೆ. ಮಂಗಳವಾರ ಸಂಜೆ ಗೋಧೋಳಿ ಲಗ್ನದಲ್ಲಿ ಗಂಗಾ ಪೂಜೆ ನೆರವೇರಿಸಿದ ಬಳಿಕ ಗಣಮಗ ಪಿಳ್ಳೆಮಟ್ಟಿ ಗುಡ್ಡದಲ್ಲಿ ಎತ್ತರದ ಕಂಬವೇರಿ ಈ ಕಾರ್ಣಿಕ ನುಡಿದಿದ್ದಾರೆ.
ಈ ಕಾರ್ಣಿಕ ನುಡಿಯನ್ನು ವಿಶ್ಲೇಷಿಸಿರುವ ಹಿರಿಯರು, ಈ ಬಾರಿ ಉತ್ತಮ ಮಳೆಯಾಗಿ ರೈತರಿಗೆ ಹೆಚ್ಚಿನ ಲಾಭ ತಂದು ಕೊಡಬಹುದು. ಹಾಗೆಯೇ ಅತಿ ಹೆಚ್ಚು ಮಳೆಯಿಂದ ಒಂದಷ್ಟು ಹಾನಿಯೂ ಸಂಭವಿಸಬಹುದು ಎಂದು ಊಹಿಸಿದ್ದಾರೆ.