alex Certify ‘ಚತುರ್ಥಿ’ ಅಂಗವಾಗಿ ಬ್ರಿಟನ್ ನಲ್ಲಿ ಗಣೇಶನ ಚಿನ್ನದ ಗಟ್ಟಿ ಬಿಡುಗಡೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಚತುರ್ಥಿ’ ಅಂಗವಾಗಿ ಬ್ರಿಟನ್ ನಲ್ಲಿ ಗಣೇಶನ ಚಿನ್ನದ ಗಟ್ಟಿ ಬಿಡುಗಡೆ

ಭಾರತದಲ್ಲಿ ಗೌರಿ – ಗಣೇಶ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಊರು – ಕೇರಿಗಳಲ್ಲಿ ಗಣೇಶನ ಪ್ರತಿಮೆ ಪ್ರತಿಷ್ಠಾಪಿಸಲಾಗುತ್ತದೆ. ಈ ಬಾರಿ ಗಣೇಶ ಚತುರ್ಥಿ ಆಗಸ್ಟ್ 31ರಂದು ಆಚರಿಸಲಾಗುತ್ತದೆ.

ಕೊರೊನಾ ಕಾರಣಕ್ಕೆ ಕಳೆದ ಎರಡು ವರ್ಷಗಳಿಂದ ಭಾರತದಲ್ಲಿ ಮಂಕಾಗಿದ್ದ ಗಣೇಶ ಚತುರ್ಥಿ ಈಗ ಮತ್ತೆ ಅದ್ದೂರಿಯಿಂದ ನಡೆಯುವ ನಿರೀಕ್ಷೆ ಇದೆ. ಭಾರತದಲ್ಲಿ ಗೌರಿ – ಗಣೇಶ ಹಬ್ಬದ ಆಚರಣೆಗೆ ಸಿದ್ಧತೆ ನಡೆದಿದ್ದರೆ ಅತ್ತ ಬ್ರಿಟನ್ ನಲ್ಲಿ ಚತುರ್ಥಿ ಅಂಗವಾಗಿ ಗಣೇಶನ ಚಿನ್ನದ ಗಟ್ಟಿ ಬಿಡುಗಡೆಯಾಗಿದೆ.

ಹೌದು, ಬ್ರಿಟನ್ ಸರ್ಕಾರಿ ಸ್ವಾಮ್ಯದ ಟಂಕಸಾಲೆ ರಾಯಲ್ ಮಿಂಟ್, ಗಣೇಶನ ಚಿತ್ರ ಕೆತ್ತಿದ 24 ಕ್ಯಾರೆಟ್ ಚಿನ್ನದ ಗಟ್ಟಿಯನ್ನು ಬಿಡುಗಡೆ ಮಾಡಿದ್ದು, ಈ ವಾರದಿಂದ ಆನ್ಲೈನ್ ನಲ್ಲಿ ಮಾರಾಟವಾಗುತ್ತಿದೆ.

20 ಗ್ರಾಂ ನ 999.0 ಫೈನ್ ಗೋಲ್ಡ್ ಗಣೇಶ ಬುಲಿಯನ್ ಬಾರ್ ಬೆಲೆ 1,111,80 ರೂಪಾಯಿಗಳಾಗಿದ್ದು, ಕಳೆದ ವರ್ಷ ದೀಪಾವಳಿ ಸಂದರ್ಭದಲ್ಲಿ ರಾಯಲ್ ಮಿಂಟ್ ಬಿಡುಗಡೆಗೊಳಿಸಿದ್ದ 24 ಕ್ಯಾರಟ್ ಲಕ್ಷ್ಮಿ ಚಿತ್ರದಂತೆಯೇ ಈ ಗೋಲ್ಡ್ ಬಾರ್ ಇದೆ. ಲಕ್ಷ್ಮಿ ಚಿತ್ರವನ್ನು ವಿನ್ಯಾಸಗೊಳಿಸಿದ್ದ ಎಮ್ಮಾ ನೋಬಲ್ ಅವರೇ ಗಣೇಶನ ಚಿತ್ರವನ್ನು ಕೂಡ ವಿನ್ಯಾಸ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...