ಬಾಸ್ಸೆಟೆರೆ(ಸೇಂಟ್ ಕಿಟ್ಸ್ ಮತ್ತು ನೆವಿಸ್): ವೆಸ್ಟ್ ಇಂಡೀಸ್ ವಿರುದ್ಧ ಇಲ್ಲಿ ನಡೆದ ಮೂರನೇ ಟಿ20 ಅಂತರಾಷ್ಟ್ರೀಯ ಪಂದ್ಯದಲ್ಲಿ ಭಾರತ 7 ವಿಕೆಟ್ಗಳ ಗೆಲುವು ಸಾಧಿಸಿದೆ.
ಸೂರ್ಯಕುಮಾರ್ ಯಾದವ್ ಅವರು ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿ 76 ರನ್ ಗಳಿಸಿದರು. ಭಾರತ ಈಗ ಐದು ಪಂದ್ಯಗಳ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದ್ದು, ಸರಣಿಯ ಕೊನೆಯ ಎರಡು ಪಂದ್ಯಗಳಿಗಾಗಿ ಕ್ರಿಕೆಟ್ ಕಾರವಾನ್ USA ನ ಫ್ಲೋರಿಡಾಕ್ಕೆ ತೆರಳಿದೆ.
ಮೊದಲಿಗೆ ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 164 ರನ್ ಗಳಿಸಿತು. ಬ್ರೆಂಡನ್ ಕಿಂಗ್ 20, ಕೈಲ್ ಮೇಯರ್ಸ್ 73, ನಿಕೋಲಸ್ ಪೂರನ್ 22, ರಾವ್ ಮನ್ ಪೊವೆಲ್ 23, ಶಿಮ್ರಾನ್ ಹೆಟ್ಮಯರ್ 20 ರನ್ ಗಳಿಸಿದರು. ಭಾರತದ ಪರವಾಗಿ ಭುವನೇಶ್ವರ್ ಕುಮಾರ್ 2, ಹಾರ್ದಿಕ್ ಪಾಂಡ್ಯ 1, ಅರ್ಷ್ ದೀಪ್ 1 ವಿಕೆಟ್ ಪಡೆದರು.
ಗೆಲುವಿನ ಗುರಿ ಬೆನ್ನತ್ತಿದ ಭಾರತ 19 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 165 ರನ್ ಗಳಿಸಿತು. ರೋಹಿತ್ ಶರ್ಮ 11, ಸೂರ್ಯಕುಮಾರ್ ಯಾದವ್ 76, ಶ್ರೇಯಸ್ ಅಯ್ಯರ್ 24, ರಿಷಬ್ ಪಂತ್ ಅಜೇಯ 33, ಹಾರ್ದಿಕ್ ಪಾಂಡ್ಯ 4, ದೀಪಕ್ ಹೂಡ ಅಜೇಯ 10 ರನ್ ಗಳಿಸಿದರು. ವಿಂಡೀಸ್ ಪರವಾಗಿ ಡೊಮಿನಿಕ್ ಡ್ರೇಕ್ಸ್, ಜೇಸನ್ ಹೋಲ್ಡರ್, ಅಖಿಲ್ ಹುಸೇನ್ ತಲಾ ಒಂದು ವಿಕೆಟ್ ಪಡೆದರು.