ಬೆಂಗಳೂರು: ಪ್ರಸಕ್ತ ಸಾಲಿನ ಸಿಇಟಿ ರ್ಯಾಂಕಿಂಗ್ ಪಟ್ಟಿಯಲ್ಲಿ ಉಂಟಾಗಿರುವ ಗೊಂದಲ ವಿಚಾರಕ್ಕೆ ಸಂಬಂಧಿಸಿದಂತೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಪ್ರತಿಕ್ರಿಯೆ ನೀಡಿದ್ದು, ಸಿಇಟಿ ರ್ಯಾಂಕಿಂಗ್ ವಿಚಾರದಲ್ಲಿ ಕೆಇಎ ತೀರ್ಮಾನ ಸರಿಯಾಗಿದೆ ಎಂದು ಹೇಳಿದ್ದಾರೆ.
ವಿಕಾಸಸೌಧದಲ್ಲಿ ಕೆಇಎ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವರು ಮಾತನಾಡಿ, ಮೊದಲಿನಿಂದಲೂ ಶೇಕಡ 50 ರಷ್ಟು ಅಂಕಗಳನ್ನು ಪರಿಗಣಿಸಿ ರ್‍ಯಾಂಕ್ ನೀಡಲಾಗುತ್ತಿತ್ತು. ಸಿಇಟಿ ಮತ್ತು ಪಿಯುಸಿ ಪರೀಕ್ಷೆಯ ಶೇಕಡ 50ರಷ್ಟು ಅಂಕಗಳನ್ನು ಪರಿಗಣಿಸಿ ರ್‍ಯಾಂಕ್ ನೀಡಲಾಗುತ್ತಿತ್ತು. 2020 -21ರಲ್ಲಿ ಪಿಯುಸಿ ಅಂಕಗಳನ್ನು ಪರಿಗಣಿಸಿರಲಿಲ್ಲ. ಸಿಇಟಿ ಪರೀಕ್ಷೆ ಅಂಕಗಳನ್ನು ಮಾತ್ರ ಪರಿಗಣಿಸಿ ರಾಂಕ್ ನೀಡಲಾಗಿತ್ತು ಎಂದರು.
ಆದರೆ 2022ರ ವಿದ್ಯಾರ್ಥಿಗಳಿಗೆ ಎರರೂ ಪರೀಕ್ಷೆಗಳ ಅಂಕಗಳನ್ನು ಪರಿಗಣಿಸಲಾಗಿದೆ. ಕಳೆದ ಸಲ ಪಿಯುಸಿ ಅಂಕವನ್ನು ವಿವಿಧ ಮಾನದಂಡಗಳಡಿ ನೀಡಲಾಗಿದೆ. ಎಸ್ಎಸ್ಎಲ್ಸಿ ಯ ಶೇಕಡ 40ರಷ್ಟು, ಪ್ರಥಮ ಪಿಯುಸಿಯ ಶೇಕಡ 40ರಷ್ಟು ಅಂಕ, ಉತ್ತಮ ನಡವಳಿಕೆ ಹೊಂದಿದ್ದ ವಿದ್ಯಾರ್ಥಿಗಳಿಗೆ ಶೇಕಡಾ 10ರಷ್ಟು ಅಂಕ, ಇಂಟರ್ನಲ್ ಅಸಿಸ್ಮೆಂಟ್ ಶೇಕಡ 10 ರಷ್ಟು ಅಂತ ಗುರುತಿಸಿ ಅಂಕ ನೀಡಲಾಗಿತ್ತು. ಕಳೆದ ಬಾರಿಗಿಂತ ಪ್ರಶಕ್ತ ವರ್ಷ ಹೆಚ್ಚು ಮಾನದಂಡದಿಂದ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಹೀಗಾಗಿ ಈ ಬಾರಿ ಕೆಇಎ ತೆಗೆದುಕೊಂಡ ತೀರ್ಮಾನ ಸರಿಯಾಗಿದೆ. 2021 ನೇ ಸಾಲಿನ ಬ್ಯಾಚ್ ನವರಿಗೆ ಕಳೆದ ಬಾರಿಯೇ ಅವಕಾಶ ಸಿಕ್ಕಿತ್ತು. ಹೀಗಾಗಿ ಈ ವರ್ಷ ತೆಗೆದುಕೊಂಡ ನಿರ್ಣಯ ಸರಿಯಾಗಿದೆ ಎಂದು ಹೇಳಿದ್ದಾರೆ.