ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನದಲ್ಲಿ ನಿಲ್ದಾಣದಲ್ಲಿ ಮಂಗಳವಾರದಂದು ಅನಾಹುತವೊಂದು ಸ್ವಲ್ಪದರಲ್ಲೇ ತಪ್ಪಿದೆ. ಸ್ಟ್ಯಾಂಡ್ ಸಂಖ್ಯೆ 201ರಲ್ಲಿ ನಿಲ್ಲಿಸಲಾಗಿದ್ದ ಇಂಡಿಗೋ ವಿಮಾನದ ಕೆಳಗಡೆಗೆ ಗೋ ಫಸ್ಟ್ ಏರ್ ಲೈನ್ಸ್ ಗೆ ಸೇರಿದ ಕಾರು ಚಲಿಸಿದ್ದು, ಅದೃಷ್ಟವಶಾತ್ ಡಿಕ್ಕಿಯಾಗಿಲ್ಲ.
ಇಂಡಿಗೋ ವಿಮಾನ ದೆಹಲಿಯಿಂದ ಪಾಟ್ನಾಗೆ ತೆರಳಬೇಕಿದ್ದು ಇದಕ್ಕೂ ಮುನ್ನ ಸ್ಟ್ಯಾಂಡ್ ನಲ್ಲಿ ನಿಲ್ಲಿಸಲಾಗಿತ್ತು. ಈ ವೇಳೆ ಗೋ ಫಸ್ಟ್ ಏರ್ ಲೈನ್ಸ್ ಚಾಲಕ ಮಾರುತಿ ಡಿಸೈರ್ ಕಾರಿನಲ್ಲಿ ಬಂದಿದ್ದು, ವಿಮಾನದ ಮೂತಿಯ ಕೆಳಗಡೆಯೇ ಕಾರು ನುಗ್ಗಿಸಿದ್ದಾನೆ.
ಈ ಘಟನೆ ನಡೆಯುತ್ತಿದ್ದಂತೆ ಕಾರಿನ ಚಾಲಕನನ್ನು ವಶಕ್ಕೆ ಪಡೆದು ಮದ್ಯಪಾನ ಸೇವಿಸಿದ್ದಾನೋ ಎಂಬುದರ ಕುರಿತು ಪರಿಶೀಲಿಸಲಾಗಿದ್ದು, ವರದಿ ನೆಗೆಟಿವ್ ಬಂದಿದೆ ಎನ್ನಲಾಗಿದೆ. ಆ ಬಳಿಕ ವಿಮಾನ ತನ್ನ ಹಾರಾಟ ಮುಂದುವರಿಸಿದ್ದು, ಡಿಜಿಸಿಎ ಘಟನೆಯ ತನಿಖೆಗೆ ಆದೇಶಿಸಿದೆ.