ಸಂಸ್ಕೃತ ಕಲಿಯುವುದರಿಂದ ಮಕ್ಕಳ ಬುದ್ಧಿ ಚುರುಕಾಗುತ್ತದೆ. ಕೃತಕ ಬುದ್ಧಿಮತ್ತೆ ಮತ್ತು ತಂತ್ರಜ್ಞಾನಕ್ಕೂ ಇದು ಹೊಂದಿಕೆಯಾಗುತ್ತದೆ. ಹೀಗಾಗಿ ಎಳೆ ವಯಸ್ಸಿನಲ್ಲಿಯೇ ಮಕ್ಕಳಿಗೆ ಸಂಸ್ಕೃತ ಕಲಿಸಬೇಕು. ಜೊತೆಗೆ ಎಲ್ಲರೂ ಇದನ್ನು ಕಲಿಯಬೇಕು ಎಂದು ಮಾಜಿ ಕೇಂದ್ರ ಸಚಿವ ಡಾ. ಸುಬ್ರಮಣಿಯನ್ ಸ್ವಾಮಿ ಸಲಹೆ ನೀಡಿದ್ದಾರೆ.
ಸೋಮವಾರದಂದು ಮೈಸೂರಿನ ಪ್ರಾದೇಶಿಕ ಶಿಕ್ಷಣ ಸಂಸ್ಥೆಯಲ್ಲಿ ನಡೆದ ‘ಸಂಸ್ಥಾಪನ ದಿನಾಚರಣೆ’ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು, ಕೇವಲ ಬ್ರಾಹ್ಮಣರಷ್ಟೇ ಪಂಡಿತರು ಹಾಗೂ ಜ್ಞಾನಿಗಳಾಗಿರಬೇಕಿಲ್ಲ ಎಂದು ತಿಳಿಸಿದರು.
ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎಲ್ಲರ ಡಿಎನ್ಎ ಒಂದೇ ಎಂದು ಹೇಳಿದ ಸುಬ್ರಮಣಿಯನ್ ಸ್ವಾಮಿ, ಮೊದಲು ನಾವು ಭಾರತೀಯರು ಎಂಬ ಭಾವನೆ ಇರಬೇಕು. ಒಮ್ಮೆ ನಾನು ಹೈದರಾಬಾದಿಗೆ ಹೋದ ಸಂದರ್ಭದಲ್ಲಿ ಓವೈಸಿಗೆ ನನ್ನ ಹಾಗೂ ನಿನ್ನ ಡಿಎನ್ಎ ಒಂದೇ. ಬೇಕಾದರೆ ಚೆಕ್ ಮಾಡಿಸಿಕೊಳ್ಳೋಣ ಎಂದಿದ್ದೆ. ಆದರೆ ಆತ ಬರಲಿಲ್ಲ ಎಂದು ನುಡಿದರು.