ನವದೆಹಲಿ: ಜುಲೈ 2022 ರಲ್ಲಿ 1,48,995 ಕೋಟಿ ರೂಪಾಯಿಗಳ ಒಟ್ಟು GST ಆದಾಯವನ್ನು ಸಂಗ್ರಹಿಸಲಾಗಿದೆ. ಜುಲೈ ತಿಂಗಳ GST ಆದಾಯ ಸಂಗ್ರಹವು ಇದುವರೆಗೆ ಎರಡನೇ ಅತಿ ಹೆಚ್ಚು ಮೊತ್ತವಾಗಿದೆ. ಕಳೆದ ವರ್ಷ ಇದೇ ತಿಂಗಳ ಆದಾಯಕ್ಕಿಂತ 28 ಶೇಕಡ ಹೆಚ್ಚಾಗಿದೆ ಎಂದು ಹಣಕಾಸು ಸಚಿವಾಲಯ ಹೇಳಿದೆ.
ಸಿ.ಜಿ.ಎಸ್.ಟಿ. 25,751 ಕೋಟಿ ರೂಪಾಯಿ, ಎಸ್.ಜಿ.ಎಸ್.ಟಿ. 32,807 ಕೋಟಿ ರೂಪಾಯಿ ಮತ್ತು ಐ.ಜಿ.ಎಸ್.ಟಿ. 79, 518 ಕೋಟಿ ರೂಪಾಯಿ, ಸರಕುಗಳ ಆಮದಿನ ಮೇಲೆ ಸಂಗ್ರಹವಾದ 995 ಕೋಟಿ ರೂಪಾಯಿ ಸೇರಿದಂತೆ 10,920 ಕೋಟಿ ರೂಪಾಯಿ ಸೆಸ್ ಸೇರಿದೆ. ಜಿ.ಎಸ್.ಟಿ. ಜಾರಿಯಾದ ನಂತರ ಇದು ಎರಡನೇ ಅತಿ ಹೆಚ್ಚು ಆದಾಯವಾಗಿದೆ. ಸತತ ಐದು ತಿಂಗಳಿನಿಂದ ಮಾಸಿಕ ಜಿ.ಎಸ್.ಟಿ. ಆದಾಯವು 1.4 ಲಕ್ಷ ಕೋಟಿ ರೂಪಾಯಿಗಳಿಗಿಂತ ಹೆಚ್ಚಿದ್ದು, ಪ್ರತಿ ತಿಂಗಳು ಸ್ಥಿರವಾದ ಏರಿಕೆಯನ್ನು ತೋರಿಸುತ್ತಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.