ಸಾಮಾನ್ಯವಾದ ಪಟಾಪಟ್ಟಿ ಚೆಡ್ಡಿಯೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸಂಚಲನ ಮೂಡಿಸಿದೆ.
ಅರ್ಷದ್ ವಾಹಿದ್ ಎಂಬ ಬಳಕೆದಾರರು ಈ ಚಿತ್ರವನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. “ಈ ಪಟ್ಟಾಪಟ್ಟಿ ಪ್ಯಾಂಟ್ 15 ಸಾವಿರ ಏಕೆ?’ ಎಂದು ಅವರು ಶೀರ್ಷಿಕೆಯಲ್ಲಿ ಬರೆದಿದ್ದಾರೆ.
ನೆಟ್ಟಿಗರನ್ನು ಬೆರಗುಗೊಳಿಸಿರುವ ಸಂಗತಿಯೆಂದರೆ, ದೈನಂದಿನ ಬಳಕೆ ಸಾಮಾನ್ಯ ಬಟ್ಟೆಗೆ ಅಷ್ಟೊಂದು ಬೆಲೆ ಏಕೆ ಎಂಬುದಾಗಿದೆ.
ನೀಲಿ, ಹಸಿರು, ಕೆಂಪು ಬಣ್ಣದ ಪಟ್ಟೆ ಹೊಂದಿರುವ ಚೆಡ್ಡಿ ಮತ್ತು ಶರ್ಟ್ ಮೇಲೆ ಚೆಕ್ಕರ್ ಪ್ರಿಂಟ್ ಇದೆ.
ಜಾಲತಾಣದಲ್ಲಿ ಆ ಚಿತ್ರ ಅಪ್ಲೋಡ್ ಮಾಡಿದ ನಂತರ, ವೈರಲ್ ಆಗಿದ್ದು 15,450 ಬೆಲೆಯ ಸಾಮಾನ್ಯ ಜೋಡಿ ಶಾರ್ಟ್ಸ್ ಜಾಲತಾಣಿಗರನ್ನು ಕಂಗೆಡಿಸಿದೆ. ಇದಷ್ಟೇ ಅಲ್ಲ ಇದರೊಂದಿಗೆ 11,450 ರೂಪಾಯಿ ಮೌಲ್ಯದ ಶರ್ಟ್ ಕೂಡ ಇದೆ.
ಈ ಹಿಂದೆ, ಅಮೆಜಾನ್ನಲ್ಲಿ 25,999 ರೂಪಾಯಿ ಬೆಲೆಯ ಸಾಮಾನ್ಯ ಪ್ಲಾಸ್ಟಿಕ್ ಬಕೆಟ್ ಗ್ರಾಹಕರನ್ನು ಕಂಗೆಡಿಸಿತ್ತು. ಟ್ವಿಟ್ಟರ್ ಬಳಕೆದಾರರು ವಿಲಕ್ಷಣವಾದ ಬೆಲೆಯನ್ನು ಹಾಕಿದ ನಂತರ ಇದು ಸಂಭವಿಸಿದೆ.
ಈ ಬೆಲೆಯು ಕೈ ತಪ್ಪಿ ಹಾಕಲಾಗಿದೆಯೋ ಅಥವಾ ಯಂತ್ರ ದೋಷದ ಪರಿಣಾಮವಾಗಿದೆಯೇ ಎಂದು ನೆಟ್ಟಿಗರು ಯೋಚಿಸಿದ್ದಾರೆ. ಅದರ ಬೆಲೆಯನ್ನು ಸಮರ್ಥಿಸಲು ಬಕೆಟ್ನಲ್ಲಿ ವಿಶೇಷತೆ ಏನಿರಬೇಕು ಎಂಬುದರ ಕುರಿತು ಮಿಮ್ಗಳು ಜೋಕ್ಗಳು ಹುಟ್ಟಿಕೊಂಡಿದ್ದವು.
https://twitter.com/earendil_1/status/1553361850980798464?ref_src=twsrc%5Etfw%7Ctwcamp%5Etweetembed%7Ctwterm%5E1553361850980798464%7Ctwgr%5Ea5afe7bb2a14943875f46fb8fc5