
ನಿಮ್ಮ ಬಾಲ್ಯದಲ್ಲಿ ಬಾಯಾರಿದ ಕಾಗೆ ಕಥೆಯನ್ನು ಬಹುಶಃ ನೀವು ಕೇಳಿರಬಹುದು. ಕಾಗೆಯೊಂದು ಬಾಯಾರಿಕೆ ನೀಗಿಸಲು ಹೂಜಿಯ ನೀರನ್ನು ಮೇಲೆತ್ತಲು ಕಲ್ಲುಗಳನ್ನು ಬಳಸುತ್ತದೆ. ಒಂದೊಂದೇ ಕಲ್ಲುಗಳನ್ನು ಹೂಜಿಗೆ ಹಾಕುತ್ತಾ ನೀರನ್ನು ಮೇಲೆತ್ತಿ ಕುಡಿಯುತ್ತದೆ. ಇದೀಗ ಕಾಗೆಯೊಂದರ ಇಂಥದ್ದೇ ವಿಡಿಯೋ ಇಂಟರ್ನೆಟ್ ನಲ್ಲಿ ವೈರಲ್ ಆಗಿದೆ.
ವೈರಲ್ ಆಗಿರೋ ವಿಡಿಯೋದಲ್ಲಿ ಬಾಟಲಿಯಿಂದ ಹಕ್ಕಿಯೊಂದು ನೀರು ಕುಡಿಯಲು ಪ್ರಯತ್ನಿಸಿದೆ. ಆದರೆ, ಅದಕ್ಕೆ ನೀರು ಕುಡಿಯಲು ಸಾಧ್ಯವಾಗಿಲ್ಲ. ಹೀಗಾಗಿ ಕಲ್ಲನ್ನು ಬಾಟಲಿಯೊಳಗೆ ಹಾಕಿದೆ. ಈ ವಿಡಿಯೋವನ್ನು ಕ್ರಿಯೇಚರ್ ಆಫ್ ಗಾಡ್ ಎಂಬ ಪುಟವು ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದು, 8 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಹೊಂದಿದೆ.
ಹೌದು, ಹಕ್ಕಿ ಬಾಟಲಿಯೊಳಗೆ ಒಂದು ಕಲ್ಲನ್ನು ಹಾಕಿದೆ. ನಂತರ ಗುಟುಕು ನೀರು ಕುಡಿದು ತನ್ನ ಬಾಯಾರಿಕೆಯನ್ನು ನೀಗಿಸಿಕೊಂಡಿದೆ. ಈ ವಿಡಿಯೋವನ್ನು ಹಂಚಿಕೊಳ್ಳುತ್ತಾ ಬಾಯಾರಿದ ಕಾಗೆಯ ಕಥೆ ಸರಿಯಾಗಿದೆ ಎಂದು ಪೋಸ್ಟ್ಗೆ ಶೀರ್ಷಿಕೆ ನೀಡಲಾಗಿದೆ. ನೆಟ್ಟಿಗರು ವಿಡಿಯೋ ನೋಡಿ ಅಚ್ಚರಿಗೊಂಡಿದ್ದಾರೆ. ಬುದ್ಧಿವಂತ ಹಕ್ಕಿ ಅಂತಾ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
https://twitter.com/mdumar1989/status/1553130358702587904?ref_src=twsrc%5Etfw%7Ctwcamp%5Etweetembed%7Ctwterm%5E1553130358702587904%7Ctwgr%5E40ca17cc63179b2efb92a0e88d8d76fbd4cf8b50%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fold-viral-video-of-magpie-using-stones-to-drink-water-from-a-bottle-will-remind-you-of-the-thirsty-crow-story-1981785-2022-07-30