ಶಿಕ್ಷಕರ ನೇಮಕಾತಿ ಹಗರಣದಲ್ಲಿ ಸಿಕ್ಕಿಬಿದ್ದು ಬಂಧನಕ್ಕೊಳಗಾಗಿರುವ ಪಶ್ಚಿಮ ಬಂಗಾಳ ಮಾಜಿ ಸಚಿವ ಪಾರ್ಥ ಚಟರ್ಜಿ ಹಾಗೂ ಆತನ ಆಪ್ತೆ ಅರ್ಪಿತಾ ಮುಖರ್ಜಿಯವರ ರಂಗಿನ ಕಥೆಗಳು ಬಗೆದಷ್ಟೂ ವಿಸ್ತಾರಗೊಳ್ಳುತ್ತಿದೆ. ಪಾರ್ಥ ಚಟರ್ಜಿ ತಾನು ಸಂಪಾದಿಸಿದ ಅಕ್ರಮ ಸಂಪತ್ತನ್ನು ಅರ್ಪಿತಾ ಮುಖರ್ಜಿಯ ನಿವಾಸದಲ್ಲಿ ಸಂಗ್ರಹಿಸುತ್ತಿದ್ದು, ಆಕೆಯ ಎರಡು ನಿವಾಸದಲ್ಲಿ ಐವತ್ತು ಕೋಟಿ ರೂಪಾಯಿ ನಗದು, ಚಿನ್ನಾಭರಣ ಇಟ್ಟಿರುವುದು ಜಾರಿ ನಿರ್ದೇಶನಾಲಯದ ಅಧಿಕಾರಿಗಳ ದಾಳಿ ವೇಳೆ ಬೆಳಕಿಗೆ ಬಂದಿತ್ತು.
ಅಷ್ಟೇ ಅಲ್ಲ, ಲೈಂಗಿಕ ಅಟಿಕೆಗಳು, ಬೆಲೆಬಾಳುವ ಉಡುಗೊರೆಗಳು ಸಹ ಪತ್ತೆಯಾಗಿದ್ದರ ಮಧ್ಯೆ ಕೋಟ್ಯಾಂತರ ರೂ. ಬೆಲೆ ಬಾಳುವ ಹಲವು ಐಶಾರಾಮಿ ಕಾರುಗಳನ್ನು ಸಹ ಇವರುಗಳು ಹೊಂದಿರುವುದು ಬಯಲಾಗಿದೆ. ಮರ್ಸಿಡಿಸ್ ಬೆಂಜ್, ಮಿನಿ ಕೂಪರ್ ಸೇರಿದಂತೆ ಹತ್ತಕ್ಕೂ ಅಧಿಕ ದುಬಾರಿ ಕಾರುಗಳು ಇವರುಗಳ ಬಳಿ ಇದ್ದು, ಇದೀಗ ಈ ಪೈಕಿ ಮೂರು ಕಾರು ಹೊರತುಪಡಿಸಿದರೆ ಉಳಿದೆಲ್ಲವೂ ನಾಪತ್ತೆಯಾಗಿದೆ.
ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ಮಾಡುವ ಕೆಲ ದಿನಗಳ ಹಿಂದಷ್ಟೇ ಮತ್ತೆರಡು ಲಕ್ಸುರಿ ಕಾರುಗಳನ್ನು ಬೇನಾಮಿ ಹೆಸರಿನಲ್ಲಿ ಪಾರ್ಥ ಚಟರ್ಜಿ ಬುಕ್ ಮಾಡಿದ್ದು, ಇವುಗಳನ್ನು ಅರ್ಪಿತಾ ಮುಖರ್ಜಿಗೆ ಗಿಫ್ಟ್ ಮಾಡಲು ರೆಡಿಯಾಗಿದ್ದರು. ಇವರಿಬ್ಬರೂ ಆಗಾಗ್ಗೆ ಜಾಲಿ ರೈಡ್ ಗೆ ತೆರಳುತ್ತಿದ್ದು ಇದಕ್ಕಾಗಿ ಮರ್ಸಿಡಿಸ್ ಬೆಂಜ್ ಹಾಗೂ ಮಿನಿ ಕೂಪರ್ ಕಾರುಗಳನ್ನು ಬಳಸುತ್ತಿದ್ದರು. ಅಲ್ಲದೆ ದೊಡ್ಡ ಗಾತ್ರದ ಈ ಕಾರುಗಳಲ್ಲಿ ಪಾರ್ಟಿ ಸಹ ಮಾಡುತ್ತಿದ್ದರು ಎಂದು ಹೇಳಲಾಗಿದೆ.