ಮೆಕ್ಸಿಕೋದಲ್ಲಿ ವೃದ್ಧೆಯೊಬ್ಬಳ ಕೊನೆಯ ಆಸೆಯಂತೆ ಸಮಾಧಿ ಮೇಲೆ ಐದೂವರೆ ಅಡಿ ಎತ್ತರದ ಶಿಶ್ನದ ಪ್ರತಿಮೆಯನ್ನು ನಿರ್ಮಿಸಲಾಗಿದೆ.
ಕ್ಯಾಟರಿನಾ ಒರ್ಡುನಾ ಪೆರೆಜ್ ಅವರ ಕುಟುಂಬ ಆಕೆಯ ಪ್ರೀತಿ ಮತ್ತು ಜೀವನದ ಸಂತೋಷವನ್ನು ಗುರುತಿಸಿ ಸ್ಮಾರಕ ನಿರ್ಮಿಸಿದೆ. ಮೊಮ್ಮಗ ಅಲ್ವಾರೋ ಮೋಟಾ ಲಿಮಾನ್ ತಿಳಿಸಿದ್ದಾರೆ.
ತನ್ನ ಸಮಾಧಿಯ ಮೇಲೆ ಶಿಶ್ನದ ಪ್ರತಿಮೆಯನ್ನು ನಿರ್ಮಿಸಬೇಕೆಂದು ಆಗಾಗ ಹೇಳುತ್ತಿದ್ದರು. ಆದರೆ, ಆಕೆಯ ಮರಣ ಸಮೀಪಿಸುವವರೆಗೆ ನಾವು ಅದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ನಿಧನದ ನಂತರ ಕುಟುಂಬದವರೆಲ್ಲರೂ ಸೇರಿ ಅಜ್ಜಿಯ ಕನಸನ್ನು ನನಸಾಗಿಸಲು ನಿರ್ಧರಿಸಿದೆವು ಎಂದು ಮೋಟಾ ಲಿಮಾನ್ ಹೇಳಿದ್ದಾರೆ.
ಪ್ರತಿಮೆಯನ್ನು ನಿರ್ಮಿಸಿದ ಇಂಜಿನಿಯರ್ ಇಸಿಡ್ರೊ ಲಾವೊಗ್ನೆಟ್ ಅವರು, ಮೊದಲಿಗೆ ಇದು ತಮಾಷೆ ಎಂದು ನಾನು ಭಾವಿಸಿದ್ದೆ. ಈ ರೀತಿಯ ಶಿಲ್ಪ ಅಥವಾ ಸ್ಮಾರಕಗಳನ್ನು ನೋಡುವುದು ಸಾಮಾನ್ಯವಲ್ಲ. ಆದರೆ, ಐದೂವರೆ ಅಡಿ ಎತ್ತರದ 600 ಪೌಂಡ್ ನ ಪ್ರತಿಮೆ ನಿರ್ಮಿಸಿ ಜುಲೈ 23ರಂದು ಅನಾವರಣಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.