ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಮತ್ತೊಂದು ಚಿನ್ನದ ಪದಕ ಬಂದಿದೆ. Jeremy Lalrinnunga 67 ಕೆಜಿ ವಿಭಾಗದ ವೇಟ್ ಲಿಫ್ಟಿಂಗ್ ನಲ್ಲಿ ಭಾರತಕ್ಕೆ ಈ ಪದಕವನ್ನು ಗಳಿಸಿ ಕೊಟ್ಟಿದ್ದಾರೆ.
ಈ ಮೊದಲು ಮೀರಾಬಾಯಿ ಚಾನು, ಮೊದಲ ಚಿನ್ನದ ಪದಕವನ್ನು ಗಳಿಸಿದ್ದು ಇದೀಗ, Jeremy Lalrinnunga ಎರಡನೇ ಚಿನ್ನದ ಪದಕವನ್ನು ಗೆದ್ದಿದ್ದಾರೆ.
19 ವರ್ಷದ Jeremy Lalrinnunga ಒಟ್ಟು 300 ಕೆಜಿ ತೂಕವನ್ನು ಎತ್ತುವ ಮೂಲಕ ಚಿನ್ನದ ಪದಕಕ್ಕೆ ಭಾಜನರಾದರು.
ಈಗಾಗಲೇ ಬಿಂದ್ಯಾ ರಾಣಿ ದೇವಿ, ಸಂಕೇತ್ ಸರ್ಗರ್ ಬೆಳ್ಳಿ, ಗುರುರಾಜ ಪೂಜಾರಿ ಕಂಚಿನ ಪದಕವನ್ನು ಗಳಿಸಿದ್ದು, ಭಾರತಕ್ಕೆ ಈವರೆಗೆ ಎರಡು ಚಿನ್ನ ಎರಡು ಬೆಳ್ಳಿ ಹಾಗೂ ಒಂದು ಕಂಚಿನ ಪದಕ ಬಂದಂತಾಗಿದೆ.