ಹಾಂಗ್ ಕಾಂಗ್ ಬಾಯ್ ಬ್ಯಾಂಡ್ ಮಿರರ್ ಸಂಗೀತ ಕಾರ್ಯಕ್ರಮದ ವೇಳೆ ದೈತ್ಯ ವಿಡಿಯೋ ಪ್ಯಾನೆಲ್ ವೇದಿಕೆಯ ಮೇಲೆ ಬಿದ್ದು, ಕನಿಷ್ಠ ಇಬ್ಬರು ಡ್ಯಾನ್ಸರ್ ಗಳು ಗಾಯಗೊಂಡಿದ್ದಾರೆ. ಅವರಲ್ಲಿ ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ನಂತರ ಆಯೋಜಕರು, ಅಧಿಕಾರಿಗಳು ಶೋ ರದ್ದುಪಡಿಸಿದ್ದಾರೆ.
ಹಾಂಗ್ ಕಾಂಗ್ ಬಾಯ್ ಬ್ಯಾಂಡ್ ಮಿರರ್ ಸದಸ್ಯರಾದ ಅನ್ಸನ್ ಲೊ ಮತ್ತು ಎಡನ್ ಲುಯಿ ಅವರು ಡಜನ್ ನರ್ತಕರೊಂದಿಗೆ ಪ್ರದರ್ಶನ ನೀಡುವಾಗ ಎಲ್ಇಡಿ ಪರದೆಗಳಲ್ಲಿ ಒಂದು ವೇದಿಕೆಯ ಮೇಲೆ ಅಪ್ಪಳಿಸಿದೆ. ಡ್ಯಾನ್ಸರ್ ಒಬ್ಬರ ತಲೆಗೆ ಬೋರ್ಡ್ ಅಪ್ಪಳಿಸಿದ್ದರಿಂದ ಅವರು ಗಾಯಗೊಂಡಿದ್ದಾರೆ.
ಈ ವೇಳೆ ಪ್ರೇಕ್ಷಕರು ಭಯಭೀತರಾಗಿ ಕಿರುಚಾಡಿದ್ದಾರೆ. ವೇದಿಕೆಯಲ್ಲಿದ್ದ ಉಳಿದ ಕಲಾವಿದರು ಗಾಯಗೊಂಡ ಕಲಾವಿದರನ್ನು ರಕ್ಷಿಸಿದ್ದಾರೆ. ಗಾಯಾಳುಗಳನ್ನು ಕ್ವೀನ್ ಎಲಿಜಬೆತ್ ಆಸ್ಪತ್ರೆಗೆ ದಾಖಲಿಸಲಾಗಿದೆ. ನರ್ತಕಿಯರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದ್ದು, ಮತ್ತೊಬ್ಬರು ಸ್ಥಿರವಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಹಾಂಗ್ ಕಾಂಗ್ ಕೊಲಿಜಿಯಂನಲ್ಲಿ ಮಿರರ್ನ 12 ನಿಗದಿತ ಸಂಗೀತ ಕಚೇರಿ ವೇಳೆ ಅವಘಡ ನಡೆದ ನಂತರ ಸಂಗೀತ ಕಾರ್ಯಕ್ರಮ ನಿಲ್ಲಿಸಲಾಯಿತು.
https://twitter.com/ezracheungtoto/status/1552674359424102401