ಗ್ರೀನ್ ಬಾಟಲ್ನಿಂದಾಗಿಯೇ ಗಮನ ಸೆಳೆಯುತ್ತಿದ್ದ ಸ್ಪ್ರೈಟ್, ಬರೋಬ್ಬರಿ ಅರವತ್ತು ವರ್ಷದ ಬಳಿಕ ಬಣ್ಣ ಬದಲಿಸಿದೆ. ಸ್ಪ್ರೈಟ್ ಪೋಷಕ ಕಂಪನಿ ಕೋಕಾ-ಕೋಲಾ ಹೊಸ ವಿನ್ಯಾಸವು ಆಗಸ್ಟ್ 1 ರಂದು ಹೊರಬರುತ್ತಿದೆ. ಪ್ಲಾಸ್ಟಿಕ್ ಪ್ಯಾಕೇಜಿಂಗ್ ವಿಷಯದಲ್ಲಿ ಆದೇಶವನ್ನು ಬೆಂಬಲಿಸುವ ಪ್ರಯತ್ನದ ಭಾಗವಾಗಿದೆ ಎಂದು ಕಂಪನಿ ಹೇಳಿದೆ.
ಪ್ರಸ್ತುತ ಹಸಿರು ಪ್ಲಾಸ್ಟಿಕ್ ಬಾಟಲಿಯನ್ನು ಪಾಲಿಥಿಲೀನ್ ಟೆರೆಫ್ತಾಲೇಟ್ (ಪಿಇಟಿ) ನಿಂದ ತಯಾರಿಸಲಾಗುತ್ತದೆ, ಇದನ್ನು ಸಾಮಾನ್ಯವಾಗಿ ಕಾರ್ಪೆಟ್ಗಳು ಮತ್ತು ಬಟ್ಟೆಗಳಂತಹ ಏಕ-ಬಳಕೆಯ ವಸ್ತುಗಳಾಗಿ ಪರಿವರ್ತಿಸಲಾಗುತ್ತದೆ. ಹೊಸ ಬಾಟಲಿ ಮರುಬಳಕೆ ಮಾಡುವುದು ಸುಲಭ ಎಂದು ಕಂಪನಿ ಹೇಳಿದೆ.
ಸ್ಪ್ರೈಟ್ನ ಕ್ಯಾನ್ಗಳು ಮತ್ತು ಪ್ಯಾಕೇಜಿಂಗ್ ಗ್ರಾಫಿಕ್ಸ್ ಇನ್ನೂ ಹಸಿರಾಗಿಯೇ ಇರುತ್ತದೆ, ಆದರೆ ಅದರ ಲೋಗೋ ಬದಲಾಗುತ್ತದೆ. 1961ರಲ್ಲಿ ಯುಎಸ್ ನಲ್ಲಿ ಮೊದಲ ಬಾರಿಗೆ ಬಿಡುಗಡೆಯಾದಾಗಿನಿಂದ ಲೆಮನ್ ಲೈಮ್ ಸ್ಟಾ ಡ್ರಿಂಕ್ ಅನ್ನು ಹಸಿರು ಬಣ್ಣದಲ್ಲಿ ಪ್ಯಾಕ್ ಮಾಡಲಾಗಿತ್ತು. ಕೋಕ್ ಪ್ರಕಾರ, ಈ ಪಾನೀಯವು ಅದರ ಹೆಚ್ಚು ಮಾರಾಟವಾದ ಉತ್ಪನ್ನಗಳಲ್ಲಿ ಒಂದಾಗಿದೆ.