alex Certify ಫ್ರೈಡ್ ​ರೈಸ್​ ನಲ್ಲಿತ್ತು ಸತ್ತ ಜಿರಳೆ…! ಇದು ಈರುಳ್ಳಿ ಎಂದ ಸಿಬ್ಬಂದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫ್ರೈಡ್ ​ರೈಸ್​ ನಲ್ಲಿತ್ತು ಸತ್ತ ಜಿರಳೆ…! ಇದು ಈರುಳ್ಳಿ ಎಂದ ಸಿಬ್ಬಂದಿ

ಚಂಡೀಗಢದ ನೆಕ್ಸಸ್​ ಎಲಾಂಟೆ ಮಾಲ್​ನ ಫುಡ್​ ಕೋರ್ಟ್​ನಲ್ಲಿ ಶುಕ್ರವಾರ ಊಟದಲ್ಲಿ ಸತ್ತ ಜಿರಳೆ ಪತ್ತೆಯಾಗಿದೆ. ಅದೇ ಮಾಲ್​ನಲ್ಲಿರುವ ಪ್ರಸಿದ್ಧ ಉಪಾಹಾರ ಗೃಹದಲ್ಲಿ ಆರ್ಡರ್​ ಮಾಡಿದ ಚೋಲೆ ಬಾತುರ್​ ಪ್ಲೇಟ್​ನಲ್ಲಿ ಹಲ್ಲಿ ಕಂಡುಬಂದ ಒಂದು ತಿಂಗಳ ನಂತರ ಈ ಘಟನೆ ವರದಿಯಾಗಿದೆ.

ಮೌಲಿ ಕಾಂಪ್ಲೆಕ್ಸ್​ನ ನಿವಾಸಿ ಅನಿಲ್​ ಕುಮಾರ್​, ʼಮಾಲ್​ನ ಫುಡ್​ ಕೋರ್ಟ್​ನಲ್ಲಿರುವ ಚೈನೀಸ್​ ಫುಡ್​ ಔಟ್​ಲೆಟ್​ “ನಿ ಹಾಮೊ” ನಿಂದ ಫ್ರೈಡ್ ​ರೈಸ್​ ಆರ್ಡರ್​ ಮಾಡಿದ್ದೆವು, ಅದರಲ್ಲಿ ಜಿರಳೆ ಕಂಡು ಆಘಾತವಾಯಿತುʼ ಎಂದು ಹೇಳಿದ್ದಾರೆ.

ಅವರು ಅದನ್ನು ರೆಸ್ಟೋರೆಂಟ್​ ಸಿಬ್ಬಂದಿಗೆ ತೋರಿಸಿದಾಗ ಅವರು ಅದನ್ನು ಈರುಳ್ಳಿ ತುಂಡು ಎಂದು ತಳ್ಳಿಹಾಕಿದರು. ಹೀಗಾಗಿ ಗ್ರಾಹಕರು ಪೊಲೀಸರಿಗೆ ಕರೆ ಮಾಡಬೇಕಾಯಿತು.

ರೆಸ್ಟೊರೆಂಟ್​ ಮತ್ತು ಮಾಲ್​ ಆಡಳಿತದ ವಿರುದ್ಧ ಕ್ರಮ ಕೈಗೊಳ್ಳುವಂತೆ ಅನಿಲ್​ ಕುಮಾರ್​ ಪೊಲೀಸರಿಗೆ ನೀಡಿದ ದೂರಿನಲ್ಲಿ ಆಗ್ರಹಿಸಿದ್ದಾರೆ. ಆದರೆ ಆಹಾರ ಮಾದರಿಗಳ ಪರಿಶೋಧನೆ ಫಲಿತಾಂಶ ಬಂದ ನಂತರವೇ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ಸಿಕ್ಕಿದೆ. ಎಲಾಂಟೆ ಫುಡ್​ ಕೋರ್ಟ್​ ಅಯಾನ್​ ಫುಡ್ಸ್​ ಒಡೆತನದಲ್ಲಿದೆ ಮತ್ತು ರೆಸ್ಟೋರೆಂಟ್​ ನೇರವಾಗಿ ಅವರಿಂದಲೇ ನಡೆಸಲ್ಪಡುತ್ತದೆ.

ವರದಿಯ ಪ್ರಕಾರ, ಮಾಲ್​ ವಕ್ತಾರರು ಹೇಳಿಕೆಯಲ್ಲಿ, ಕಡಿಮೆ ಅವಧಿಯಲ್ಲಿ ಇದು ಎರಡನೇ ಘಟನೆಯಾಗಿದೆ ಮತ್ತು ಇದು ನಮಗೆ ಸ್ವೀಕಾರಾರ್ಹವಲ್ಲ. ನೈರ್ಮಲ್ಯ ಮತ್ತು ಸುರಕ್ಷತೆಯು ಅತ್ಯಂತ ಮಹತ್ವದ್ದಾಗಿದೆ. ಫುಡ್ ಕೋರ್ಟ್​ನಲ್ಲಿ ಸಂರ್ಪೂಣ ಆಹಾರ ಸುರಕ್ಷತಾ ಪರಿಶೋಧನೆ ನಡೆಸಲು ಮತ್ತು ಅಗತ್ಯ ದಂಡನಾತ್ಮಕ ಕ್ರಮ ತೆಗೆದುಕೊಳ್ಳುವಂತೆ ನಾವು ತಿಳಿಸುತ್ತೇವೆ ಎಂದಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...