ಸೆಕ್ಸ್ ಜೀವನದ ಒಂದು ಭಾಗ. ಸೆಕ್ಸ್ ಜೀವನ ಸುಖಕರವಾಗಿದ್ದರೆ ದಾಂಪತ್ಯ ಗಟ್ಟಿಯಾಗಿರುತ್ತದೆ. ಪ್ರತಿಯೊಬ್ಬರೂ ತಮ್ಮ ಸೆಕ್ಸ್ ಜೀವನ ಸುಖ-ಸಂತೋಷದಿಂದ ಕೂಡಿರಲಿ ಎಂದು ಬಯಸ್ತಾರೆ. ಆದ್ರೆ ಕೆಲಸದ ಒತ್ತಡ ಮತ್ತು ಜೀವನ ಶೈಲಿ ಸೆಕ್ಸ್ ರುಚಿಯನ್ನು ಆಸಕ್ತಿಯನ್ನು ಕಡಿಮೆ ಮಾಡುತ್ತದೆ. ಲೈಂಗಿಕ ಶಕ್ತಿ ಹೆಚ್ಚಾಗಿ ಸೆಕ್ಸ್ ನಲ್ಲಿ ಆಸಕ್ತಿ ಹೆಚ್ಚಿಸಲು ಮಾರುಕಟ್ಟೆಯಲ್ಲಿ ಸಿಗುವ ಔಷಧಿ ಬೇಕಾಗಿಲ್ಲ. ನೈಸರ್ಗಿಕ ಆಹಾರ ಸೇವನೆ ಸಾಕಾಗುತ್ತದೆ.
ಸೋಯಾ ಮಹಿಳೆಯರ ಲೈಂಗಿಕ ಆರೋಗ್ಯಕ್ಕೆ ಬಹಳ ಒಳ್ಳೆಯದು. ಖಾಸಗಿ ಅಂಗದಲ್ಲಿ ನೈಸರ್ಗಿಕ ತೈಲ ಅಂಶವನ್ನು ಹೆಚ್ಚಿಸುವ ಜೊತೆಗೆ ಲೈಂಗಿಕ ಸಂತೋಷವನ್ನು ಹೆಚ್ಚಿಸುತ್ತದೆ. ಪುರುಷರಲ್ಲಿ ಪ್ರಾಸ್ಟೇಟ್ ಬೆಳೆಯುವುದನ್ನು ತಡೆಯುತ್ತದೆ.
ಒಣ ಹಣ್ಣಿನಂತಹ ಡ್ರೈ ಫ್ರೂಟ್ಸ್ ಗಳ ಸೇವನೆ ಮಾಡುವುದ್ರಿಂದ ರಕ್ತ ಪರಿಚಲನೆ ಸರಳವಾಗುತ್ತದೆ. ಇದು ಸೆಕ್ಸ್ ನಲ್ಲಿ ಸಂಗಾತಿಗಳು ಪರಾಕಾಷ್ಠೆ ತಲುಪಲು ನೆರವಾಗುತ್ತದೆ.
ಬೆಳ್ಳುಳ್ಳಿಯಲ್ಲಿರುವ ಅಲಿಸಿನ್ ಅಂಶ ಶರೀರಿದಲ್ಲಿ ರಕ್ತ ಸಂಚಾರವನ್ನು ಸುಲಭಗೊಳಿಸುತ್ತದೆ. ಬೆಳ್ಳುಳ್ಳಿಯಲ್ಲಿರುವ ಮ್ಯಾಂಗನೀಸ್, ಕ್ಯಾಲ್ಸಿಯಂ, ರಂಜಕ, ವಿಟಮಿನ್ ಬಿ 1, ವಿಟಮಿನ್ ಬಿ 6 ದೇಹದ ರಚನೆಯನ್ನು ಬಲಗೊಳಿಸುತ್ತದೆ.
ಮೀನಿನಲ್ಲಿರುವ ಒಮೆಗಾ -3 ಕೊಬ್ಬಿನಾಮ್ಲ ಲೈಂಗಿಕ ಹಾರ್ಮೋನುಗಳನ್ನು ಹೆಚ್ಚಿಸಲು ನೆರವಾಗುತ್ತದೆ. ಇದು ಮಹಿಳೆಯರ ಲೈಂಗಿಕ ಜೀವನ ಉತ್ತಮಗೊಳಿಸಲು ಬಹಳ ಒಳ್ಳೆಯದು.
ಸಂಭೋಗದ ಸಮಯದಲ್ಲಿ ಸಂಗಾತಿಯನ್ನು ಉತ್ತೇಜಿಸಲು ಓಟ್ಸ್ ನೆರವಾಗುತ್ತದೆ. ಓಟ್ಸ್ ತಿನ್ನುವುದ್ರಿಂದ ಪುರುಷರ ಖಾಸಗಿ ಅಂಗದ ಗಾತ್ರದಲ್ಲಿ ಬದಲಾವಣೆ ಕಾಣಬಹುದಾಗಿದೆ.