ಬೆಳಗಾವಿ: ಆಗಸ್ಟ್ 2 ರಂದು ಬೆಳಗಾವಿ ಜಿಲ್ಲೆ ಕಿತ್ತೂರು ಬಂದ್ ಗೆ ಕರೆ ನೀಡಲಾಗಿದೆ. ಮಠಾಧೀಶರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಕಿತ್ತೂರು ರಾಣಿ ಚೆನ್ನಮ್ಮ ಕೋಟೆ ಮರು ಸೃಷ್ಟಿಗೆ ಸರ್ಕಾರ ನಿರ್ಧರಿಸಿದೆ. ಬಚ್ಚನಕೇರಿ ಗ್ರಾಮದ ಬಳಿ 57 ಎಕರೆ ಭೂಸ್ವಾಧೀನಕ್ಕೆ ನಿರ್ಧಾರ ಕೈಗೊಳ್ಳಲಾಗಿದ್ದು, ಆಕ್ಷೇಪಣೆ ಸಲ್ಲಿಸಲು ಕೋರಿ ಜಿಲ್ಲಾಧಿಕಾರಿಗಳಿಂದ ಪ್ರಕಟಣೆ ನೀಡಲಾಗಿದೆ.
ಬೆಳಗಾವಿ ಜಿಲ್ಲಾಡಳಿತದ ನಿರ್ಧಾರಕ್ಕೆ ಭಾರಿ ವಿರೋಧ ವ್ಯಕ್ತವಾಗಿದ್ದು, ಕೋಟೆಯ ಪಕ್ಕದಲ್ಲಿ ಕೋಟೆ ಮರುಸೃಷ್ಠಿ ನಿರ್ಮಾಣಕ್ಕೆ ಪಟ್ಟು ಹಿಡಿಯಲಾಗಿದೆ. ಬೇರೆ ಕಡೆ ಕೋಟೆಯ ಮರುಸೃಷ್ಟಿ ವಿರೋಧಿಸಿ ಕಿತ್ತೂರು ಬಂದ್ ಗೆ ಕರೆ ನೀಡಲಾಗಿದೆ. ಮಠಾಧೀಶರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಬಂದ್ ಗೆ ತೀರ್ಮಾನಿಸಲಾಗಿದೆ.