65 ವರ್ಷ ವಯೋಮಿತಿ ದಾಟಿರುವ ನ್ಯಾಯಬೆಲೆ ಅಂಗಡಿ ಮಾಲೀಕರುಗಳಿಗೆ ಶಾಕಿಂಗ್ ಮಾಹಿತಿಯೊಂದು ಇಲ್ಲಿದೆ. ಇಂಥವರ ವಿವರಗಳನ್ನು ಸರ್ಕಾರ ಸಂಗ್ರಹಿಸುತ್ತಿದ್ದು, ಪರವಾನಗಿ ರದ್ದುಗೊಳಿಸುವ ಸಾಧ್ಯತೆ ಇದೆ.
ಪಡಿತರ ವ್ಯವಸ್ಥೆಯಲ್ಲಿ ಈಗ ಆನ್ಲೈನ್, ಬಯೋಮೆಟ್ರಿಕ್ ಜೊತೆಗೆ ಅಂಗಡಿ ಮಾಲೀಕರು ಲ್ಯಾಪ್ಟಾಪ್ ಬಳಸುವುದನ್ನು ಕಡ್ಡಾಯಗೊಳಿಸಲಾಗಿದ್ದು, ಈ ವ್ಯವಸ್ಥೆಗೆ 60 ವರ್ಷ ದಾಟಿದವರು ಹೊಂದಿಕೊಳ್ಳುವುದು ಕಷ್ಟ ಎಂಬ ಕಾರಣಕ್ಕೆ ಸರ್ಕಾರ, ಈಗಾಗಲೇ ಅನುಕಂಪದ ಆಧಾರದಲ್ಲಿ ಪರವಾನಗಿ ವರ್ಗಾವಣೆ ಮಾಡುವ ನಿಯಮಗಳಿಗೆ ತಿದ್ದುಪಡಿ ತಂದಿದೆ.
ಇದೀಗ 65 ವರ್ಷ ವಯೋಮಿತಿ ದಾಟಿರುವ ಮಾಲೀಕರ ನ್ಯಾಯಬೆಲೆ ಅಂಗಡಿಗಳ ಪರವಾನಗಿಯನ್ನೇ ರದ್ದುಗೊಳಿಸಲು ರಾಜ್ಯ ಸರ್ಕಾರ ಹೊರಟಿದ್ದು, ಆದರೆ ಇದಕ್ಕೆ ರಾಜ್ಯ ಸರ್ಕಾರಿ ನ್ಯಾಯಬೆಲೆ ಅಂಗಡಿಗಳ ಮಾಲೀಕರ ಸಂಘ ವಿರೋಧ ವ್ಯಕ್ತಪಡಿಸಿದೆ. ಅಲ್ಲದೆ ಒಂದೊಮ್ಮೆ ಅಂತಹ ಕ್ರಮಕ್ಕೆ ಮುಂದಾದರೆ ಅದರ ವಿರುದ್ಧ ನ್ಯಾಯಾಲಯದ ಮೆಟ್ಟಿಲನ್ನೂ ಏರಲು ನಾವು ಸಿದ್ದ ಎಂದು ತಿಳಿಸಿದೆ.