ಶ್ರಾವಣ ಮಾಸಕ್ಕೆ ಹಿಂದೂ ಧರ್ಮದಲ್ಲಿ ಮಹತ್ವದ ಸ್ಥಾನವಿದೆ. ಈ ತಿಂಗಳ ಭೋಲೇನಾಥನ ಆರಾಧನೆ ನಡೆಯುತ್ತದೆ. ಈ ತಿಂಗಳು ಭಗವಂತ ವಿಷ್ಣುವಿನ ಆರಾಧನೆ ಕೂಡ ನಡೆಯುತ್ತದೆ. ಭಗವಂತ ವಿಷ್ಣು ಶಿವನನ್ನು ಹಾಗೂ ಶಿವ ವಿಷ್ಣುವನ್ನು ಆರಾಧಿಸುತ್ತಾರೆ. ಹಾಗಾಗಿ ಈ ತಿಂಗಳು ವಿಷ್ಣು, ಶಿವ ಇಬ್ಬರ ಆರಾಧನೆ ಮಾಡಿದ್ರೆ ಫಲ ಹೆಚ್ಚು ಎಂದು ನಂಬಲಾಗಿದೆ.
ಶ್ರಾವಣ ಮಾಸದಲ್ಲಿ ಈಶ್ವರನ ಪೂಜೆ ಜೊತೆ ದಾನಕ್ಕೂ ಮಹತ್ವದ ಸ್ಥಾನವಿದೆ. ಈ ತಿಂಗಳು ಮಾಡಿದ ದಾನ ಹೆಚ್ಚು ಫಲ ನೀಡುತ್ತದೆ ಎಂದು ನಂಬಲಾಗಿದೆ. ಶ್ರಾವಣ ಮಾಸದಲ್ಲಿ ಬಡವರು, ಬ್ರಾಹ್ಮಣರಿಗೆ, ಹಸಿದು ಬಂದವರಿಗೆ ದಾನ ಮಾಡಬೇಕು. ಬಟ್ಟೆ, ಆಹಾರ, ಹಸು, ಕುದುರೆ, ಹಾಸಿಗೆ, ನೀರು ದಾನ ಮಾಡುವುದು ಶುಭಕರ.
ಪತ್ನಿ, ಪುತ್ರಿಗೆ ದುಃಖ ನೀಡಿ ತೋರಿಕೆಗೆ ದಾನ ಮಾಡುವ ವ್ಯಕ್ತಿಯ ದಾನ ಫಲ ನೀಡುವುದಿಲ್ಲ. ಹಾಗೆ ಅವಶ್ಯಕತೆಯಿರುವವರಿಗೆ ಮಾತ್ರ ದಾನ ಮಾಡಬೇಕು. ಅವಶ್ಯಕತೆಯಿರುವವರಿಗೆ ದಾನ ಮಾಡಿದ್ರೆ ಮಾತ್ರ ದಾನದ ಫಲ ಸಿಗುತ್ತದೆ. ಆಕಳು, ಬ್ರಾಹ್ಮಣ ಹಾಗೂ ರೋಗಿಗಳಿಗೆ ದಾನ ಮಾಡ್ತಿರುವ ವ್ಯಕ್ತಿಯನ್ನು ಎಂದಿಗೂ ತಡೆಯಬಾರದು. ಹೀಗೆ ತಡೆದ್ರೆ ತಡೆದ ವ್ಯಕ್ತಿಗೆ ಪಾಪ ಅಂಟಿಕೊಳ್ಳುತ್ತದೆ.
ಎಳ್ಳು, ಅಕ್ಕಿ, ದಾನ್ಯಗಳನ್ನು ದಾನ ಮಾಡುವಾಗ ಕೈನಲ್ಲಿಯೇ ದಾನ ನೀಡಬೇಕು. ಹೀಗೆ ಮಾಡಿದ್ರೆ ಮಾತ್ರ ಮನೆಗೆ ಪ್ರಯೋಜನವಾಗುತ್ತದೆ. ಪೂರ್ವ ದಿಕ್ಕಿಗೆ ಮುಖ ಮಾಡಿ ದಾನ ಮಾಡಬೇಕು. ದಾನ ಪಡೆಯುವ ವ್ಯಕ್ತಿ ಮುಖ ಉತ್ತರ ದಿಕ್ಕಿಗಿರಬೇಕು.