
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಜಲಪಾತಗಳ ತಾಲ್ಲೂಕು ಎಂದೇ ಹೆಸರುವಾಸಿ. ಹುಬ್ಬಳ್ಳಿಯಿಂದ ಸುಮಾರು 65 ಕಿಲೋ ಮೀಟರ್ ದೂರದಲ್ಲಿ ಯಲ್ಲಾಪುರ ಇದೆ.
ಯಲ್ಲಾಪುರ ತಾಲ್ಲೂಕಿನ ಮಾಗೋಡು ಫಾಲ್ಸ್ ರಮಣೀಯ ಸ್ಥಳವಾಗಿದೆ. ಘಟ್ಟದ ಮೇಲಿನಿಂದ ಬೇಡ್ತಿ ನದಿಯು ಸುಮಾರು 200 ಮೀಟರ್ ಎತ್ತರದಿಂದ ಧುಮ್ಮಿಕ್ಕುತ್ತದೆ. ಈ ಮನಮೋಹಕ ಜಲಪಾತದ ಸೌಂದರ್ಯಕ್ಕೆ ನೀವು ಮನಸೊಲದೇ ಇರಲಾರಿರಿ.
ಸುತ್ತಲಿನ ಹಸಿರು ಸೌಂದರ್ಯ ನಿಮ್ಮನ್ನು ಹೊಸಲೋಕಕ್ಕೆ ಕೊಂಡೊಯ್ಯುತ್ತದೆ. ಮಾಗೋಡು ಫಾಲ್ಸ್ ಗೆ ಯಲ್ಲಾಪುರದಿಂದ ಸುಮಾರು 20 ಕಿಲೋ ಮೀಟರ್ ದೂರದಲ್ಲಿದೆ.
ಯಲ್ಲಾಪುರದ ಸಮೀಪದಲ್ಲಿರುವ ಮತ್ತೊಂದು ಫಾಲ್ಸ್ ಸಾತೋಡಿ ಜಲಪಾತ. ಯಲ್ಲಾಪುರದಿಂದ ಸುಮಾರು 32 ಕಿಲೋ ಮೀಟರ್ ದೂರದಲ್ಲಿರುವ ಈ ಫಾಲ್ಸ್ ಮನಮೋಹಕವಾಗಿದೆ. ದಟ್ಟ ಕಾನನದ ನಡುವೆ ಸುಮಾರು 15 ಮೀಟರ್ ಎತ್ತರದಿಂದ ನೀರು ಧುಮ್ಮಿಕ್ಕುತ್ತದೆ. ಮುಗಿಲೆತ್ತರದ ಹಸಿರು ಬೆಟ್ಟಗಳ ಸೌಂದರ್ಯ ನಿಮ್ಮನ್ನು ಆಕರ್ಷಿಸುತ್ತದೆ.
ನೀವೂ ಒಮ್ಮೆ ಈ ಜಲಪಾತಗಳ ಸೌಂದರ್ಯವನ್ನು ಕಣ್ತುಂಬಿಕೊಳ್ಳಿ. ಸುತ್ತಮುತ್ತ ಅನೇಕ ಪ್ರವಾಸಿ ತಾಣಗಳಿದ್ದು, ಮೊದಲೇ ಮಾಹಿತಿ ಪಡೆದುಕೊಂಡು ಹೋದರೆ, ಅನುಕೂಲವಾಗುತ್ತದೆ.