ದೈಹಿಕ ಅಥವಾ ಮಾನಸಿಕವಾಗಿ ಮಕ್ಕಳಿಗೆ ಸಮಸ್ಯೆ ಎದುರಾದಾಗ ಪೋಷಕರು ಅವರ ರಕ್ಷಣೆಗೆ ಬರುತ್ತಾರೆ. ಇದು ಸಹಜವಾಗಿ, ಅವರಲ್ಲಿ ಒಂದಷ್ಟು ಪರಿಹಾರ ಇಟ್ಟುಕೊಂಡಿರುತ್ತಾರೆ. ಆದರೆ ಪ್ರಾಣಿಗಳೇನು ಮಾಡಬಹುದು?
ಅವೂ ಸಹ ಪ್ರಾಕೃತಿಕವಾಗಿ ಒಲಿದ ಅವಕಾಶವನ್ನು ಬಳಸಿಕೊಂಡು ತಮ್ಮ ಮರಿಗಳಿಗೆ ನೆರವಾಗುತ್ತವೆ. ಇದಕ್ಕೊಂದು ಉದಾಹರಣೆಯಾಗಿ, ಮಂಗವೊಂದು ತನ್ನ ಮರಿಯನ್ನು ಉಳಿಸಲು ಮಾಡಿದ ಸಹಜ ಕ್ರಿಯೆ ನೆಟ್ಟಿಗರ ಮನ ಗೆದ್ದಿದೆ.
ಮರಿ ಮಂಗ ಉಸಿರಾಟದ ಅಡಚಣೆಗೆ ಸಿಕ್ಕಿದ್ದನ್ನು ಗಮನಿಸುವ ದೊಡ್ಡ ಮಂಗ ಅದನ್ನು ರಕ್ಷಿಸಲು ಪ್ರಯತ್ನಿಸುತ್ತಿರುವುದನ್ನು ತೋರಿಸುವ ಹೃದಯಸ್ಪರ್ಶಿ ಕ್ಲಿಪ್ ಸಾಮಾಜಿಕ ಜಾಲತಾಣದಲ್ಲಿದೆ. ಐಎಫ್ಎಸ್ ಅಧಿಕಾರಿ ಸುಸಂತ ನಂದಾ ಹಂಚಿಕೊಂಡಿರುವ ಕ್ಲಿಪ್ನಲ್ಲಿ ಕೋತಿಯು ತನ್ನ ಮರಿಯನ್ನು ಹತ್ತಿರ ಹಿಡಿದು ಎಳೆದುಕೊಂಡು ಅದನ್ನು ಒತ್ತುವುದನ್ನು ನೋಡಬಹುದು.
ಮಂಗವು ಪ್ರಥಮ ಚಿಕಿತ್ಸಾ ವಿಧಾನವನ್ನು ನಿರ್ವಹಿಸುತ್ತಿದೆ ಎಂದು ಅಧಿಕಾರಿ ನಂದಾ ಗಮನಿಸಿದ್ದು, ಯಾವುದೋ ವಸ್ತುವಿನಿಂದ ಮರಿ ಮಂಗದ ಮೇಲ್ಭಾಗದ ಶ್ವಾಸನಾಳದ ಅಡಚಣೆಯಾಗಿದ್ದು, ಅದನ್ನು ಕುಶಲತೆಯಿಂದ ದೊಡ್ಡ ಮಂಗ ಹೊರಹಾಕಲು ಪ್ರಯತ್ನಿಸಿ ಯಶಸ್ವಿಯಾಗುತ್ತದೆ.
“ಇನ್ಕ್ರೆಡಿಬಲ್….. ಮಗುವನ್ನು ಉಳಿಸಲು ಪರಿಸ್ಥಿತಿಗೆ ಅದು ಹೇಗೆ ಪ್ರತಿಕ್ರಿಯಿಸುತ್ತಿದೆ. ಇದು ದೇವರು ಎಲ್ಲರಿಗೂ ಜ್ಞಾನ ಮತ್ತು ಬುದ್ಧಿವಂತಿಕೆಯಿಂದ ಆಶೀರ್ವದಿಸಿದ್ದಾನೆ ಎಂದು ತೋರಿಸುತ್ತದೆ.’ ಎಂದು ಸಾಮಾಜಿಕ ಜಾಲತಾಣ ಬಳಕೆದಾರರು ವಿಡಿಯೋಗೆ ಕಾಮೆಂಟ್ ಮಾಡಿದ್ದಾರೆ.