alex Certify ಶಾಲೆಗೆ ಹೋಗುವಾಗ ಖುಷಿ; ವೈರಲ್ ಆಯ್ತು ಮಗುವಿನ ಮಿಲಿಯನ್‌ ಡಾಲರ್ ನಗು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಲೆಗೆ ಹೋಗುವಾಗ ಖುಷಿ; ವೈರಲ್ ಆಯ್ತು ಮಗುವಿನ ಮಿಲಿಯನ್‌ ಡಾಲರ್ ನಗು

ಶಾಲೆಗೆ ಹೋಗಲು ಅದೆಷ್ಟೋ ಮಕ್ಕಳು ಹಠ ಹಿಡಿಯುವುದು, ಪೋಷಕರು ಒತ್ತಾಯಪೂರ್ವಕವಾಗಿ, ಬಲವಂತದಿಂದ ತಂದು ಶಾಲೆಗೆ ಬಿಡುವುದು, ಅತ್ತು ಕರೆಯುವ ಸೀನ್​ಗಳು ಇರುವುದು ಸಾಮಾನ್ಯ.

ಆದರೆ, ಇಲ್ಲೊಬ್ಬಳು ಪುಟ್ಟ ಬಾಲಕಿ ಶಾಲೆಗೆ ಹೋಗುತ್ತಿರುವ ವಿಡಿಯೋವೊಂದು ಆಕೆಯ ಸಿಹಿಯಾದ ನಗುವಿನ ಕಾರಣಕ್ಕೆ ವೈರಲ್​ ಆಗಿದೆ.

ಆಕೆಯ ತಂದೆ ಶಾಲೆಗೆ ಬಿಡಲು ಬಂದಾಗ ನಗುನಗುತ್ತಾ ಸಂತೋಷ ವ್ಯಕ್ತಮಾಡುವುದು ವಿಡಿಯೋದಲ್ಲಿ ಸೆರೆಯಾಗಿದ್ದು, ಇದು ನೆಟ್ಟಿಗರನ್ನೂ ಖುಷಿಪಡಿಸಿದೆ.

ಉತ್ಸಾಹದಿಂದ ಕುಣಿಯುತ್ತಾ ಶಾಲೆ ಆವರಣ ಪ್ರವೇಶಿಸುವುದು ಶಾಲೆಗೆ ಹೋಗುವುದನ್ನು ತುಂಬಾ ಆನಂದಿಸುತ್ತಾಳೆ ಎಂಬುದನ್ನು ತೋರಿಸುತ್ತದೆ. ಅಜಯಿತ ಎಂಬುವರು ಟ್ವಿಟರ್​ನಲ್ಲಿ ಈ ವಿಡಿಯೋ ಹಂಚಿಕೊಂಡಿಡ್ಡು, ಸಾವಿರಾರು ವೀಕ್ಷಣೆ ಕಂಡಿದೆ.

ತನ್ನ ತಂದೆ ಶಾಲೆಗೆ ಬಿಡಲು ಬಂದಿದ್ದರಿಂದ ಹೇಳಲಾಗದಷ್ಟು ಸಂತೋಷ ಅವಳಿಗೆ. ತಂದೆಯೊಂದಿಗೆ ಸಂಭಾಷಣೆ ನಡೆಸುತ್ತಿದ್ದ ಆಕೆ ತನ್ನ ಶಾಲೆಯತ್ತ ಬರುತ್ತಿದ್ದಂತೆ ಕಾರಿನಿಂದ ಜಿಗಿಯುವುದು ನೋಡಬಹುದಾಗಿದೆ.‌ ಮೊದಲು ಕುಣಿಯುವ ಮಗು ಬಳಿಕ ತನ್ನ ಮಿಲಿಯನ್​ ಡಾಲರ್​ ನಗುವಿನ ಮೂಲಕ ಮಿನುಗುತ್ತಾಳೆ.

ನೆಟ್ಟಿಗರು ಬಾಲಕಿಯ ಉತ್ಸಾಹವನ್ನು ಇಷ್ಟಪಟ್ಟು, ತಮ್ಮ ಓಲ್ಡ್​ ಸ್ಕೂಲ್​ ಡೇಸ್​ ನೆನಪಿಸಿಕೊಂಡು ಮೆಲುಕು ಹಾಕಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...