alex Certify ಅಗ್ಗದ ಮೊಬೈಲ್ ಡೇಟಾ ಹೊಂದಿರುವ ದೇಶಗಳು ಯಾವುವು ಗೊತ್ತಾ….? ಪಟ್ಟಿಯಲ್ಲಿ ಭಾರತಕ್ಕೂ ಸಿಕ್ಕಿದೆ ಸ್ಥಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಗ್ಗದ ಮೊಬೈಲ್ ಡೇಟಾ ಹೊಂದಿರುವ ದೇಶಗಳು ಯಾವುವು ಗೊತ್ತಾ….? ಪಟ್ಟಿಯಲ್ಲಿ ಭಾರತಕ್ಕೂ ಸಿಕ್ಕಿದೆ ಸ್ಥಾನ

ಮೊಬೈಲ್ ಡೇಟಾ ವಿಚಾರದಲ್ಲಿ ಭಾರತಕ್ಕೆ ಎರಡು ಶುಭ ಸುದ್ದಿಗಳಿವೆ. ದೇಶದ ಮೊದಲ 5G ಸ್ಪೆಕ್ಟ್ರಮ್ ಹರಾಜಿನಲ್ಲಿ ಕೇಂದ್ರ ಸರ್ಕಾರ ದಾಖಲೆಯ ಬಿಡ್‌ಗಳನ್ನು ಸ್ವೀಕರಿಸಿದೆ. ಇನ್ನೊಂದೆಡೆ ಜಗತ್ತಿನಲ್ಲಿ ಅತಿ ಅಗ್ಗದ ಮೊಬೈಲ್‌ ಡೇಟಾ ಹೊಂದಿರೋ ರಾಷ್ಟ್ರಗಳ ಪೈಕಿ ಭಾರತ 5ನೇ ಸ್ಥಾನದಲ್ಲಿದೆ.

ದಿ ವರ್ಲ್ಡ್‌ವೈಡ್ ಮೊಬೈಲ್ ಡೇಟಾ ಪ್ರೈಸಿಂಗ್ 2022ರ ಸಮೀಕ್ಷೆಯಲ್ಲಿ ಇದು ಬಹಿರಂಗವಾಗಿದೆ. 233 ದೇಶಗಳ 5,292 ಮೊಬೈಲ್ ಡೇಟಾ ಪ್ಲಾನ್‌ಗಳನ್ನು ವಿಶ್ಲೇಷಿಸಿ ಅಗ್ಗದ ಯೋಜನೆಗಳು ಎಲ್ಲೆಲ್ಲಿವೆ ಎಂಬುದನ್ನು ಪಟ್ಟಿ ಮಾಡಲಾಗಿದೆ.  ಒಂದು GB ಡೇಟಾ ಬೆಲೆ ಎಷ್ಟು ಎಂಬುದರ ಆಧಾರದ ಮೇಲೆ ಶ್ರೇಯಾಂಕವನ್ನು ತಯಾರಿಸಲಾಗಿದೆ. ಇಸ್ರೇಲ್ ನಲ್ಲಿ 1 GB ಡೇಟಾದ ಸರಾಸರಿ ವೆಚ್ಚ ಕೇವಲ 3.20 ರೂಪಾಯಿ.

ಸೇಂಟ್ ಹೆಲೆನಾ – ದಕ್ಷಿಣ ಅಟ್ಲಾಂಟಿಕ್ ಸಾಗರದಲ್ಲಿನ ಬ್ರಿಟಿಷ್ ಸಾಗರೋತ್ತರ ಪ್ರದೇಶದಲ್ಲಿ 1 GB ಡೇಟಾ ವೆಚ್ಚ  3,320 ರೂಪಾಯಿ. ಇದು ಅತ್ಯಂತ ದುಬಾರಿ ಡೇಟಾ ಹೊಂದಿರುವ ದೇಶ. ಅತಿ ಅಗ್ಗದಲ್ಲಿ ಮೊಬೈಲ್‌ ಡೇಟಾ ಪೂರೈಸುತ್ತಿರುವ ದೇಶಗಳಲ್ಲಿ ಇಸ್ರೇಲ್ ಮೊದಲ ಸ್ಥಾನದಲ್ಲಿದ್ದರೆ ಇಟಲಿ, ಸ್ಯಾನ್ ಮರಿನೋ ಮತ್ತು ಫಿಜಿ ನಂತರದ ಸ್ಥಾನದಲ್ಲಿವೆ. ಭಾರತ 5ನೇ ಸ್ಥಾನ ಪಡೆದುಕೊಂಡಿದೆ.

ಇಸ್ರೇಲ್‌ನಲ್ಲಿ 4G LTE ಮತ್ತು 5G ನೆಟ್‌ವರ್ಕ್ ಇದೆ. ಅಮೆರಿಕಕ್ಕಿಂತಲೂ ಆಧುನಿಕವಾದ ಸ್ಮಾರ್ಟ್‌ಫೋನ್ ಮಾರುಕಟ್ಟೆಯನ್ನು ಇದು ಹೊಂದಿದೆ. ಇಟಲಿ ದೇಶ 4G ಜೊತೆಗೆ ಸುಮಾರು 95 ಪ್ರತಿಶತದಷ್ಟು ಜನರಿಗೆ 5G ಡೇಟಾವನ್ನು ಒದಗಿಸುತ್ತದೆ. ಸ್ಯಾನ್ ಮರಿನೋ 100 ಪ್ರತಿಶತ 5G ಕವರೇಜ್ ಹೊಂದಿದೆ. ಇದು 5G ನೆಟ್‌ವರ್ಕ್ ಹೊಂದಿರುವ ಮೊದಲ ಯುರೋಪಿಯನ್ ರಾಷ್ಟ್ರ. ಅಗ್ಗದ ನೆಟ್‌ವರ್ಕ್ ಪೂರೈಕೆದಾರರಲ್ಲಿ ನಾಲ್ಕನೇ ರಾಷ್ಟ್ರ ಫಿಜಿ ದ್ವೀಪದಾದ್ಯಂತ 4G ಮತ್ತು 5G ಡೇಟಾವನ್ನು ಒದಗಿಸುತ್ತದೆ.

ಮತ್ತೊಂದೆಡೆ ಸೇಂಟ್ ಹೆಲೆನಾ, ಫಾಕ್ಲ್ಯಾಂಡ್ ದ್ವೀಪಗಳು, ಸಾವೊ ಟೋಮ್ ಮತ್ತು ಪ್ರಿನ್ಸಿಪೆ, ಮಧ್ಯ ಆಫ್ರಿಕಾದ ಟೊಕೆಲಾವ್ ಮತ್ತು ಯೆಮೆನ್ ಅತ್ಯಂತ ದುಬಾರಿ ಮೊಬೈಲ್ ಡೇಟಾವನ್ನು ಹೊಂದಿವೆ. ಪಟ್ಟಿಯಲ್ಲಿ 5ನೇ ಸ್ಥಾನ ಪಡೆದಿರೋ ಭಾರತದಲ್ಲಿ ಒಂದು ಜಿಬಿ ಡೇಟಾ ಬೆಲೆ 14 ರೂಪಾಯಿ. ಜನರು ಹೆಚ್ಚಾಗಿ ಮೊಬೈಲ್ ಡೇಟಾವನ್ನು ಅವಲಂಬಿಸಿರುವ ಕಾರಣದಿಂದಾಗಿ ಭಾರತದಲ್ಲಿ ಡೇಟಾಗೆ ಅತಿಯಾದ ಬೇಡಿಕೆ ಇದೆ. ಬೇಡಿಕೆ ಹೆಚ್ಚಾಗಿರುವುದರಿಂದ ಪೂರೈಕೆದಾರರು ಹೆಚ್ಚಿನ ದರ ವಿಧಿಸುತ್ತಿದ್ದಾರೆ.

ಭಾರತ ಡಿಜಿಟಲ್ ಸಬಲೀಕರಣದ ಪ್ರಯತ್ನದಲ್ಲಿರುವುದರಿಂದ ಮೊಬೈಲ್ ಡೇಟಾವು ದೇಶದ ದೂರದ ಭಾಗಗಳನ್ನು ಸಹ ತಲುಪಿದೆ. ಅಗ್ಗದ ಮೊಬೈಲ್ ಡೇಟಾವನ್ನು ಒದಗಿಸುವ ಅಗ್ರ 20 ದೇಶಗಳಲ್ಲಿ ಮೂರನೇ ಒಂದು ಭಾಗದಷ್ಟು ಏಷ್ಯಾದ ರಾಷ್ಟ್ರಗಳಲ್ಲಿ ಭಾರತ ಮತ್ತು ನೇಪಾಳ ಸೇರಿವೆ. ಜಪಾನ್, ಬ್ರಿಟಿಷ್ ಹಿಂದೂ ಮಹಾಸಾಗರ ಪ್ರದೇಶ ಮತ್ತು ದಕ್ಷಿಣ ಕೊರಿಯಾ ಅತ್ಯಂತ ದುಬಾರಿ ಡೇಟಾವನ್ನು ಹೊಂದಿರುವ ಮೂರು ದೇಶಗಳು.

ವರದಿಯ ಪ್ರಕಾರ ಅತ್ಯುತ್ತಮ 4G ಅಥವಾ 5G ಮೂಲಸೌಕರ್ಯ ಹೊಂದಿರುವ ದೇಶಗಳು ಅಗ್ಗದ ಮೊಬೈಲ್ ಡೇಟಾ ಕೊಡುಗೆಗಳನ್ನು ಹೊಂದಿವೆ. ಸ್ಥಿರ-ಲೈನ್ ಬ್ರಾಡ್‌ಬ್ಯಾಂಡ್ ಲಭ್ಯತೆ ಕಡಿಮೆ ಅಥವಾ ಇಲ್ಲದಿರುವ ದೇಶಗಳು ಮೊಬೈಲ್ ಡೇಟಾವನ್ನು ಹೆಚ್ಚು ಅವಲಂಬಿಸಿವೆ. ಅಂತಹ ಸಂದರ್ಭಗಳಲ್ಲಿ, ಬಳಕೆದಾರರಿಗೆ ಆನ್‌ಲೈನ್‌ಗೆ ಹೋಗಲು ಮೊಬೈಲ್ ಡೇಟಾ ಏಕೈಕ ಮಾರ್ಗವಾಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...