alex Certify ಭಾರತದಲ್ಲಿವೆ ಅತಿ ಹೆಚ್ಚು ಬಿಳಿ ಕಾರುಗಳು, ಆದ್ರೆ ಜನ ಇಷ್ಟಪಡೋ ಬಣ್ಣ ಯಾವುದು ಗೊತ್ತಾ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತದಲ್ಲಿವೆ ಅತಿ ಹೆಚ್ಚು ಬಿಳಿ ಕಾರುಗಳು, ಆದ್ರೆ ಜನ ಇಷ್ಟಪಡೋ ಬಣ್ಣ ಯಾವುದು ಗೊತ್ತಾ….?

ಸಾಮಾನ್ಯವಾಗಿ ಈಗ ಪ್ರತಿ ಮನೆಯಲ್ಲೂ ಕಾರು ಇದ್ದೇ ಇರುತ್ತದೆ. ಕಾರು ಖರೀದಿ ಮಾಡುವಾಗ ಎಲ್ಲರೂ ಬಣ್ಣಕ್ಕೆ ಹೆಚ್ಚಿನ ಮಹತ್ವ ಕೊಡ್ತಾರೆ. ಯಾವ ಬಣ್ಣದ ಕಾರು ಬೇಕು ಅನ್ನೋದನ್ನು ಮೊದಲೇ ನಿರ್ಧರಿಸಿಬಿಟ್ಟಿರ್ತಾರೆ. ಪ್ರಪಂಚದಾದ್ಯಂತ ಜನರು ಬಿಳಿ ಬಣ್ಣದ ವಾಹನಗಳಿಗೆ ಹೆಚ್ಚು ಆದ್ಯತೆ ನೀಡ್ತಿರೋದು ಬಹಿರಂಗವಾಗಿದೆ.

ಜರ್ಮನಿಯ BASF ಕಂಪನಿಯ ವರದಿಯಲ್ಲಿ ಇದನ್ನು ಉಲ್ಲೇಖಿಸಲಾಗಿದೆ. ಈ ವರದಿಯ ಪ್ರಕಾರ ವಾಹನ ಪ್ರಿಯರು ಚಿಕ್ಕ ಕಾರಿಗಿಂತ ದೊಡ್ಡ ಗಾತ್ರದ ಕಾರುಗಳನ್ನೇ ಹೆಚ್ಚಾಗಿ ಖರೀದಿಸ್ತಿದ್ದಾರೆ. ಬಿಳಿ ಬಣ್ಣವನ್ನು ಬಿಟ್ಟರೆ ಅತಿ ಹೆಚ್ಚು ಕಾರುಗಳಿರೋದು ಕಪ್ಪು ಮತ್ತು ಬೂದು ಬಣ್ಣದಲ್ಲಿ. ಈ ಕಲರ್‌ಗಳು ಕೂಡ ಸಖತ್‌ ಟ್ರೆಂಡ್‌ನಲ್ಲಿವೆ.

ಪ್ರತಿ ವರ್ಷ ಯಾವ ಬಣ್ಣದ ಕಾರುಗಳು ಹೆಚ್ಚು ಫೇಮಸ್‌ ಆಗಿವೆ ಎಂಬ ಬಗ್ಗೆ BASF ವರದಿಯನ್ನು ಸಿದ್ಧಪಡಿಸುತ್ತದೆ. ಸಮೀಕ್ಷೆಯ ಪ್ರಕಾರ ಭಾರತದಲ್ಲಿ ಅತಿ ಹೆಚ್ಚು ಬಿಳಿ ಬಣ್ಣದ ವಾಹನಗಳಿವೆ. ಆದರೆ ಇತ್ತೀಚಿನ ದಿನಗಳಲ್ಲಿ ಕಪ್ಪು ಬಣ್ಣದ ಕಾರುಗಳ ಜನಪ್ರಿಯತೆ ಹೆಚ್ಚಾಗಿದೆ. 2020ಕ್ಕೆ ಹೋಲಿಸಿದರೆ ಕಪ್ಪು ಬಣ್ಣದ ವಾಹನಗಳ ಜನಪ್ರಿಯತೆ ಶೇಕಡಾ 7 ರಷ್ಟು ಹೆಚ್ಚಾಗಿದೆ.

ಬಿಳಿ ಬಣ್ಣದ ಕಾರುಗಳಿಗೆ ಬೇಡಿಕೆ ಶೇ.3ರಷ್ಟು ಕಡಿಮೆಯಾಗಿದೆ. ವಿಶೇಷವಾಗಿ ಗ್ರಾಹಕರು ಎಸ್‌ಯುವಿಯಲ್ಲಿ ಕಪ್ಪು ಬಣ್ಣವನ್ನು ಇಷ್ಟಪಡ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ, SUV ವಿಭಾಗದ ಜನಪ್ರಿಯತೆ ಬಹಳಷ್ಟು ಹೆಚ್ಚಾಗಿರೋದು ವಿಶೇಷ. ವರದಿಯ ಪ್ರಕಾರ ಇಡೀ ಜಗತ್ತಿಗೆ ಹೋಲಿಸಿದ್ರೆ ಭಾರತದಲ್ಲಿ ಹಸಿರು ಬಣ್ಣಕ್ಕೆ ಸಂಬಂಧಿಸಿದಂತೆ ವಿಭಿನ್ನ ಟ್ರೆಂಡ್ ಇದೆ. ಭಾರತದಲ್ಲಿ ಹಸಿರು ಬಣ್ಣದ ಜನಪ್ರಿಯತೆಯು 2020 ರಲ್ಲಿ ಕೇವಲ ಶೇ.1ರಷ್ಟಿತ್ತು. ಇದು 2021 ರಲ್ಲಿ 3 ಪ್ರತಿಶತಕ್ಕೆ ಏರಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...