ನವದೆಹಲಿ: ರೈಲುಗಳಲ್ಲಿ ಹಿರಿಯ ನಾಗರಿಕರಿಗೆ ರಿಯಾಯಿತಿ ರದ್ದುಗೊಳಿಸಿರುವುದಕ್ಕೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸರ್ಕಾರ ಮತ್ತೆ ರಿಯಾಯಿತಿ ಟಿಕೆಟ್ ಜಾರಿ ಮಾಡುವ ಸಾಧ್ಯತೆ ಇದೆ. ಆದರೆ ಇದು ಹೊಸಮಾನದಂಡಗಳೊಂದಿಗೆ ಜಾರಿಗೆ ಬರಬಹುದು ಎಂದು ಹೇಳಲಾಗಿದೆ.
ಸಾಮಾನ್ಯ ದರ್ಜೆ ಮತ್ತು ಸ್ಲೀಪರ್ ಗಳಿಗೆ ಮಾತ್ರ ರಿಯಾಯಿತಿ ಅನ್ವಯವಾಗಲಿದ್ದು, ಇದರೊಂದಿಗೆ 70 ವರ್ಷ ಆದವರಿಗೆ ಮಾತ್ರ ರಿಯಾಯಿತಿ ನೀಡುವ ಚಿಂತನೆ ಇದೆ. ಇದರಿಂದ ಸರ್ಕಾರಕ್ಕೆ ಆಗುವ ಹೊರೆ ಕಡಿಮೆ ಮಾಡಬಹುದು ಎನ್ನುವ ಚಿಂತನೆ ನಡೆದಿದೆ.
ಕೋವಿಡ್ ನಂತರದಲ್ಲಿ ರೈಲ್ವೆ ಇಲಾಖೆ ಹಿರಿಯ ನಾಗರಿಕರಿಗೆ ರಿಯಾಯಿತಿ ದರದ ಟಿಕೆಟ್ ರದ್ದು ಪಡಿಸಿತ್ತು. 58 ವರ್ಷ ಮೇಲ್ಪಟ್ಟ ಮಹಿಳೆಯರು ಮತ್ತು 60 ವರ್ಷ ಮೇಲ್ಪಟ್ಟ ಪುರುಷರಿಗೆ ನೀಡಲಾಗುತ್ತಿದ್ದ ರಿಯಾಯಿತಿ ರದ್ದುಪಡಿಸಿದ್ದು, ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಹೊಸ ಮಾನದಂಡಗಳೊಂದಿಗೆ ಜಾರಿಗೊಳಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.