alex Certify ಫುಡ್‌ ಡೆಲಿವರಿ ಬಾಯ್‌ ಆದ ವಿಶೇಷ ಚೇತನ ವ್ಯಕ್ತಿ…! ನೆಟ್ಟಿಗರ ಸಲಾಂ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫುಡ್‌ ಡೆಲಿವರಿ ಬಾಯ್‌ ಆದ ವಿಶೇಷ ಚೇತನ ವ್ಯಕ್ತಿ…! ನೆಟ್ಟಿಗರ ಸಲಾಂ

ಓಡಾಡಲು ಸಾಧ್ಯವಾಗದ ಸ್ಥಿತಿಯಲ್ಲಿನ ಅಂಗವಿಕಲರೊಬ್ಬರು ವೀಲ್​ಚೇರ್​ ಬಳಸಿ ಫುಡ್​ ಡೆಲವರಿ ಬಾಯ್​ ಆಗಿ ಕರ್ತವ್ಯ ನಿರ್ವಹಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದೆ.

ವಿಶೇಷ ಸಾಮರ್ಥ್ಯವುಳ್ಳ ಜೊಮಾಟೊ ಪ್ರತಿನಿಧಿ ತನ್ನ ವೀಲ್​ಚೇರ್​ ಮೂಲಕ ಆಹಾರವನ್ನು ತಲುಪಿಸುತ್ತಿರುವುದನ್ನು ನೋಡಬಹುದು. ಈಗ ವೈರಲ್​ ಆಗಿರುವ ವಿಡಿಯೋವನ್ನು ಗ್ರೂಮಿಂಗ್​ ಬುಲ್ಸ್​ ಎಂಬ ಪೇಜ್​ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದೆ.

ಅವರು ಬಳಿಸುವ ವೀಲ್​ಚೇರ್​ಗೆ ಮೋಟಾರ್​ ಜೋಡಿಸಲಾಗಿದೆ, ಇದರಿಂದಾಗಿ ಅವರ ಓಡಾಟ ಸುಲಭವಾಗಿಸಿದೆ.

ಇದು “ಸ್ಫೂರ್ತಿಗೆ ಅತ್ಯುತ್ತಮ ಉದಾಹರಣೆ ಎಂದು ಪೋಸ್ಟ್​ಗೆ ಶಿರ್ಷಿಕೆ ನೀಡಲಾಗಿದೆ. ಈ ಕ್ಲಿಪ್​ ವೈರಲ್​ ಆಗಿದ್ದು, 6 ಲಕ್ಷಕ್ಕೂ ಹೆಚ್ಚು ವೀಕ್ಷಣೆಯಾಗಿದ್ದಲ್ಲದೇ ಸಾವಿರಾರು ಮಂದಿ ಕಾಮೆಂಟ್​ ಮಾಡಿದ್ದಾರೆ. ಕೆಲವು ಬಳಕೆದಾರರು ಜೊಮಾಟೊವನ್ನು ಸಹ ಶ್ಲಾಘಿಸಿದ್ದಾರೆ. “ಅವರಿಗೆ ಕೆಲಸ ನೀಡಿದ ಝೊಮಾಟೊಗೆ ಮೊದಲ ಗೌರವ” ಎಂದು ನೆಟ್ಟಿಗರೊಬ್ಬರು ಬರೆದಿದ್ದಾರೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...