ಉತ್ತರ ಪ್ರದೇಶದ ಹರ್ದೋಯ್‌ನ ಸರ್ಕಾರಿ ಶಾಲಾ ಶಿಕ್ಷಕಿಕೆಗೆ ವಿದ್ಯಾರ್ಥಿಯೊಬ್ಬ ಮಸಾಜ್ ಮಾಡುವ ನಾಲ್ಕು ದಿನಗಳ ಹಳೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಶಿಕ್ಷಣ ಇಲಾಖೆ ಶಿಕ್ಷಕಿಯನ್ನು ಅಮಾನತುಗೊಳಿಸಿದೆ.
ವೈರಲ್ ವೀಡಿಯೊದಲ್ಲಿ, ಪೋಖಾರಿ ಪ್ರಾಥಮಿಕ ಶಾಲೆಯ ಶಿಕ್ಷಕಿ ಕುರ್ಚಿಯ ಮೇಲೆ ಆರಾಮವಾಗಿ ಕುಳಿತು ಇತರ ವಿದ್ಯಾರ್ಥಿಗಳು ತರಗತಿಯಲ್ಲಿ ಓಡುತ್ತಿರುವಾಗ ವಿದ್ಯಾರ್ಥಿಗೆ ತನ್ನ ತೋಳುಗಳನ್ನು ಮಸಾಜ್ ಮಾಡಲು ಕೇಳುತ್ತಿರುವುದನ್ನು ಕಾಣಬಹುದು.
ಬವನ್ ಬ್ಲಾಕ್ ನ ಮೂಲ ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿರುವ ಶಾಲೆಯೊಂದರಲ್ಲಿ ಸಹಾಯಕ ಶಿಕ್ಷಕಿಯಾಗಿರುವ ಊರ್ಮಿಳಾ ಸಿಂಗ್ ಅವರು ಮಕ್ಕಳಿಗೆ ಕಲಿಸುವ ಬದಲು ಮಸಾಜ್ ಮಾಡಿಸಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ವಿಡಿಯೋ ವೈರಲ್ ಆದ ಕೂಡಲೇ ಮೂಲ ಶಿಕ್ಷಾ ಅಧಿಕಾರಿ(ಬಿಎಸ್‌ಎ) ಶಿಕ್ಷಕಿ ಊರ್ಮಿಳಾ ಸಿಂಗ್ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ವಿಡಿಯೋವನ್ನು ಸಾಮಾಜಿಕ ಮಾಧ್ಯಮದ ಮೂಲಕವೂ ಸ್ವೀಕರಿಸಿದ್ದೇನೆ. ಮೇಲ್ನೋಟಕ್ಕೆ ಶಿಕ್ಷಕಿ ತಪ್ಪಿತಸ್ಥೆ ಎಂದು ಸಾಬೀತಾಗಿದ್ದು, ಅಮಾನತು ಮಾಡಲಾಗಿದೆ. ಸೂಕ್ತ ತನಿಖೆಯ ನಂತರ ಆಕೆಯ ವಿರುದ್ಧ ಇಲಾಖಾ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.
ಮಕ್ಕಳು ಶಿಕ್ಷಕಿ ಕೃತ್ಯಗಳ ಬಗ್ಗೆ ದೂರು ನೀಡುತ್ತಿದ್ದರು. ಆಕೆಯ ವಿರುದ್ಧ ಯಾವುದೇ ಔಪಚಾರಿಕ ದೂರು ದಾಖಲಾಗಿರಲಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವ್ಯಾಪಕವಾಗಿ ಹರಿದಾಡಿದ ನಂತರವೇ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಪೋಷಕರು ತಿಳಿಸಿದ್ದಾರೆ.