ಸಕ್ಕರೆ ಕಾಯಿಲೆಗೆ ಮನೆಯಂಗಳದಲ್ಲಿ ಬೆಳೆಯುವ ಎಕ್ಕೆ ಗಿಡವೂ ಮದ್ದಾಗಬಲ್ಲದು. ಪೂಜೆ, ಹೋಮಗಳಿಗೆ ಬಳಕೆಯಾಗುವ ಈ ಗಿಡದ ಅರೋಗ್ಯ ಪ್ರಯೋಜನಗಳ ಬಗ್ಗೆ ತಿಳಿಯೋಣ.
ಬಿಳಿ ಎಕ್ಕದ ಗಿಡ ತುಂಬಾ ಶ್ರೇಷ್ಠವಾದುದು. ಕಾಲಿಗೆ ಮುಳ್ಳು ಚುಚ್ಚಿ ಗಾಯವಾದರೆ ಹಿರಿಯರು ಎಕ್ಕದ ಗಿಡದ ಹಾಲನ್ನು ಹಚ್ಚಿ ಮುಳ್ಳನ್ನು ಹೊರ ತೆಗೆಯುತ್ತಿದ್ದರು. ಈ ಹಾಲು ಕಣ್ಣಿನಲ್ಲಿ ಬೀಳದಂತೆ ನೋಡಿಕೊಳ್ಳಬೇಕು. ಎಕ್ಕದ ಗಿಡದ ಎಲೆಗಳನ್ನು ಪಾದದ ಕೆಳಗೆ ಹಿಮ್ಮುಖವಾಗಿ ಇಟ್ಟು ಕಾಲು ಚೀಲವನ್ನು ಧರಿಸಿ ದಿನ ಪೂರ್ತಿಯಾಗಿ ಹಾಗೆ ಬಿಟ್ಟು ರಾತ್ರಿ ಹಾಗೇ ಮಲಗಬೇಕು. ಹೀಗೆ ಒಂದು ವಾರ ಮಾಡುವುದರಿಂದ ಮಧುಮೇಹ ಕಡಿಮೆಯಾಗುತ್ತದೆ.
ಎಕ್ಕದ ಗಿಡದ ಹೂವುಗಳು ಶಿವನಿಗೆ ಅತ್ಯಂತ ಪ್ರಿಯವಾದ ಹೂವುಗಳು. ಆದ್ದರಿಂದ ಎಕ್ಕದ ಗಿಡದ ಹೂವುಗಳನ್ನು ಶಿವನಿಗೆ ಅರ್ಪಿಸಿದರೆ ಶಿವನು ನಮ್ಮ ಬೇಡಿಕೆಯನ್ನು ಈಡೇರಿಸುತ್ತಾನೆ ಎಂದು ಹಿಂದೂ ಪುರಾಣದಲ್ಲಿ ಉಲ್ಲೇಖಿಸಲಾಗಿದೆ.