ಸಾಮಾನ್ಯವಾಗಿ ರಾತ್ರಿಯಲ್ಲಿ ಕಂಡುಬರುವ ಬಾವಲಿಗಳು ಹಗಲಿನಲ್ಲಿ ಕಾಣಸಿಗುವುದಿಲ್ಲ. ಒಂದುವೇಳೆ ಕಂಡುಬಂದರೂ ಮರಗಳಲ್ಲಿ, ಪೊದೆಗಳಲ್ಲಿ ಅಥವಾ ಪಾಳುಬಿದ್ದಿರೋ ಮನೆಗಳಲ್ಲಿ ಮುದುಡಿ ಮಲಗಿರುತ್ತದೆ. ಇದೀಗ ದೊಡ್ಡ ಗುಂಪಿನಲ್ಲಿ ಬಾವಲಿಗಳು ಹಾರಾಡುತ್ತಿರುವ ವಿಡಿಯೋ ಅಂತರ್ಜಾಲದಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರು ಹುಬ್ಬೇರಿಸಿದ್ದಾರೆ.
ಹೌದು, ಬಾವಲಿಗಳು ವಿಶ್ವದ ಅತ್ಯಂತ ಆಕರ್ಷಕ ಸಸ್ತನಿಗಳಲ್ಲಿ ಒಂದು ಅಂತಾನೆ ಪರಿಗಣಿಸಲಾಗಿದೆ. ಈ ವಿಡಿಯೋ ಅವುಗಳ ಸುತ್ತಲಿನ ಆಕರ್ಷಣೆಯನ್ನು ಹೆಚ್ಚಿಸಿದೆ. ಟ್ವಿಟ್ಟರ್ ನಲ್ಲಿ ಅಪ್‌ಲೋಡ್ ಮಾಡಲಾದ ಈ ವಿಡಿಯೋ ಲಕ್ಷಾಂತರ ವೀಕ್ಷಣೆಗಳನ್ನು ಸಂಗ್ರಹಿಸಿದೆ.
ಇಬ್ಬರು ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಆಗಸದಲ್ಲಿ ಈ ದೃಶ್ಯ ಕಂಡುಬಂದಿದೆ. ಸಾವಿರಾರು ಬಾವಲಿಗಳು ಒಂದೇ ದಿಕ್ಕಿನಲ್ಲಿ ಆಕಾಶದ ಕಡೆಗೆ ಹಾರುತ್ತಿರುವುದನ್ನು ತೋರಿಸುತ್ತದೆ. ಈ ವೇಳೆ ಅವು ಕಪ್ಪು ಹೊಗೆಯ ಗರಿಯಂತೆ ಗೋಚರಿಸುತ್ತವೆ. ಮೆಕ್ಸಿಕೋದ ಕ್ಯುವಾ ಡಿ ಲಾಸ್ ಮುರ್ಸಿಲಾಗೋಸ್‌ನಲ್ಲಿ ವಿಡಿಯೋವನ್ನು ಚಿತ್ರೀಕರಿಸಲಾಗಿದೆ ಎಂದು ವರದಿಯಾಗಿದೆ.
ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ನಂತರ ಈ ವಿಡಿಯೋ 5.5 ಮಿಲಿಯನ್ ವೀಕ್ಷಣೆಗಳನ್ನು ಸಂಗ್ರಹಿಸುವಲ್ಲಿ ಯಶಸ್ವಿಯಾಗಿದೆ. ಇದೇ ಅಲ್ಲವೇ ಪ್ರಕೃತಿಯ ನಿಜವಾದ ಸೌಂದರ್ಯ ಅಂತೆಲ್ಲಾ ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.