ಪ್ರತಿ ಮನೆಯಲ್ಲೂ ಕನಿಷ್ಠ ದಿನಕ್ಕೆರಡು ಬಾರಿಯಾದರೂ ಚಹಾ ತಯಾರಾಗುತ್ತದೆ. ಅದು ಮಾಮೂಲಿ ಚಹಾ ಆಗಿರಬಹುದು ಅಥವಾ ಗ್ರೀನ್ ಟೀ ಇರಬಹುದು. ಹೀಗೆ ಸೋಸಿ ಉಳಿದಿರುವ ಚಹಾ ಪುಡಿಯನ್ನು ಬಳಸಿ ಹಲವು ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.
ಹಾಲು ಬೆರೆಸದ ಚಹಾ ಪುಡಿಯನ್ನು ನೀರಿಗೆ ಬೆರೆಸಿ ಕೂದಲಿಗೆ ಹಾಗೂ ತಲೆಯ ಬುಡಕ್ಕೆ ಹಚ್ಚಿಕೊಳ್ಳಿ. ಅರ್ಧ ಗಂಟೆಯ ಬಳಿಕ ಸ್ನಾನ ಮಾಡಿದರೆ ಕೂದಲು ಕಾಂತಿಯುತವಾಗಿ, ಮೃದುವಾಗುತ್ತದೆ ಮತ್ತು ಕಪ್ಪು ಕೂದಲುಗಳು ಕಪ್ಪಾಗಿಯೆ ಇರುತ್ತದೆ. ನೀವು ಇದನ್ನು ಕಂಡೀಷನರ್ ಆಗಿಯೂ ಕೂಡ ಬಳಸಬಹುದು.
ಕಾಲು ನೋವು ಸುಸ್ತು ಇದ್ದರೆ ಬೆಚ್ಚನೆಯ ನೀರಿಗೆ ಉಪಯೋಗ ಮಾಡಿದ ಚಹಾ ಪುಡಿಯನ್ನು ಹಾಕಿ ಅರ್ಧ ಗಂಟೆವರೆಗೆ ಕಾಲನ್ನು ನೀರಿನಲ್ಲಿ ಅದ್ದಿ ಇಡಬೇಕು.
ಇದರಿಂದ ಕಾಲು ನೋವು, ಆಯಾಸ ಮಾಯವಾಗುತ್ತದೆ. ಚಹಾ ಪುಡಿಯನ್ನು ನೀರಲ್ಲಿ ನೇರವಾಗಿ ಹಾಕಲು ಇಷ್ಟವಾಗದಿದ್ದರೆ ಬಟ್ಟೆಯಲ್ಲಿ ಕಟ್ಟಿ ಹಾಕಬಹುದು.
ಚಹಾ ಬಾಕ್ಸ್ ಗಳನ್ನೂ ಉಪಯೋಗ ಮಾಡಿದ ಮೇಲೆ ಚೆಲ್ಲಬೇಡಿ. ಇದನ್ನು ಒಣಗಿಸಿ ಇಟ್ಟುಕೊಳ್ಳಬಹುದು. ಇದು ಡಸ್ಟ್ ಬಿನ್ ನಿಂದ ಬರುವ ಕೆಟ್ಟ ವಾಸನೆಗಳನ್ನು ತಡೆಯುತ್ತದೆ. ಟಾಯ್ಲೆಟ್ ಬಾತ್ ರೂಂ ನಲ್ಲಿ ಕೂಡಾ ಇಡಬಹುದು.