alex Certify BIG NEWS: ಕಲುಷಿತ ನೀರು ಸೇವನೆ; 10 ವರ್ಷದ ಬಾಲಕಿ ಬಲಿ; 20ಕ್ಕೂ ಹೆಚ್ಚು ಜನ ಅಸ್ವಸ್ಥ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕಲುಷಿತ ನೀರು ಸೇವನೆ; 10 ವರ್ಷದ ಬಾಲಕಿ ಬಲಿ; 20ಕ್ಕೂ ಹೆಚ್ಚು ಜನ ಅಸ್ವಸ್ಥ

ಬಳ್ಳಾರಿ: ರಾಯಚೂರಿನಲ್ಲಿ ಕಲುಷಿತ ನೀರು ದುರಂತ ಮಾಸುವ ಮುನ್ನವೇ ಇದೀಗ ಬಳ್ಳಾರಿಯಲ್ಲಿಯೂ ಅವಘಡ ಸಂಭವಿಸಿದ್ದು, ಕಲುಷಿತ ನೀರು ಸೇವಿಸಿ ಬಾಲಕಿಯೊಬ್ಬಳು ಮೃತಪಟ್ಟಿದ್ದು, 20ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿರುವ ಘಟನೆ ಗೋನಾಳ ಗ್ರಾಮದಲ್ಲಿ ನಡೆದಿದೆ.

ಬಳ್ಳಾರಿಯ ಕಂಪ್ಲಿ ತಾಲೂಕಿನ ಗೋನಾಳ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿದ್ದ ಬಾಲಕಿ ವಾಂತಿ-ಬೇಧಿಯಿಂದ ತೀವ್ರ ಅಸ್ವಸ್ಥಳಾಗಿದ್ದಳು. ನಿನ್ನೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಡಿಸ್ಚಾರ್ಜ್ ಆಗಿ ಮನೆಗೆ ಬಂದಿದ್ದ ಬಾಲಕಿ ಮತ್ತೆ ತೀವ್ರ ಅಸ್ವಸ್ಥಗೊಂಡು ಮೃತಪಟ್ಟಿದ್ದಾಳೆ. 10 ವರ್ಷದ ಸುಕನ್ಯಾ ಮೃತ ಬಾಲಕಿ.

ಗ್ರಾಮಕ್ಕೆ ಬಳ್ಳಾರಿ ಡಿ ಹೆಚ್ ಓ ಜನಾರ್ಧನ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ನಲ್ಲಿ ನೀರಿನಲ್ಲಿ ಚರಂಡಿಯ ನೀರು ಮಿಶ್ರಣಗೊಂಡು ಈ ದುರಂತ ಸಂಭವಿಸಿದೆ. ಕಲುಷಿತ ನೀರು ಸೇವಿಸಿ ಗ್ರಾಮದಲ್ಲಿ 20ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...