‘ಮಳೆ ಬಂದರೆ ಸಾಕು ನವಿಲುಗಳ ಖುಷಿಗೆ ಪಾರವೇ ಇರದು. ಅವು ಕುಣಿಯುತ್ತವೆ’ ಕೇಳಿರಬಹುದು, ಅದು ಸುಳ್ಳಲ್ಲ. ನವಿಲುಗಳು ಮಳೆಯ ಕಾರಣಕ್ಕೆ ನೃತ್ಯ ಮಾಡುವುದಿಲ್ಲ ಸಂಗಾತಿಯನ್ನು ಆಕರ್ಷಿಸಲು ರೆಕ್ಕೆ ಬಿಚ್ಚಿಕುಣಿಯುತ್ತವೆ. ನವಿಲುಗಳ ಮಿಲನದ ಅವಧಿಯು ಮಾನ್ಸೂನ್‌ನೊಂದಿಗೆ ಹೊಂದಿಕೆಯಾಗುವುದರಿಂದ ಈ ಮಾತು ಪ್ರಸಿದ್ಧವಾಗಿದೆ.
ಈ ಪೀಠಿಕೆ ಏಕೆಂದಿರಾ? ವಿಡಿಯೋ ಒಂದು ವೈರಲ್ ಆಗಿದ್ದು ಎರಡು ನವಿಲುಗಳು ಒಂದೇ ಬಾರಿಗೆ ತಮ್ಮ ಗರಿಗಳನ್ನು ಬಿಚ್ಚಿ ಸಂಭ್ರಮಿಸುವ ಅಪರೂಪದ ದೃಶ್ಯ ನೋಡಬಹುದು.
ದೊಡ್ಡದಾದ ಪಂಜರದಲ್ಲಿ ಹಲವಾರು ಸುಂದರವಾದ ನವಿಲುಗಳಿದ್ದು, ಭಾರತಿಯ ತಳಿಯ ನವಿಲು ತನ್ನ ಸಂಗಾತಿ ನೋಡಿ ಗರಿಗಳನ್ನು ಬಿಚ್ಚಿ ನೃತ್ಯ ಮಾಡಲು ಪ್ರಾರಂಭಿಸುತ್ತದೆ. ಒಂದು ಸೆಕೆಂಡಿನ ನಂತರ, ಅಲ್ಲೇ ಇದ್ದ ಬಿಳಿ ನವಿಲು ಸಹ ತನ್ನ ಗರಿಗಳನ್ನು ಹರಡಿ ನಿಲ್ಲುತ್ತದೆ.
ಈ ವಿಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ವರ್ಚಲೈಫ್ ನೇಚರ್ ಪೇಜ್‌ನಲ್ಲಿ ಹಂಚಿಕೊಳ್ಳಲಾಗಿದ್ದು, ರೀಲ್ 30 ಮಿಲಿಯನ್ ವೀಕ್ಷಣೆ ಮತ್ತು 9.60 ಲಕ್ಷ ಲೈಕ್ ಪಡೆದುಕೊಂಡಿದೆ.