ಬೆಂಗಳೂರು: ಶ್ರಾವಣ ಮಾಸದೊಂದಿಗೆ ಹಬ್ಬಗಳ ಸಾಲು ಆರಂಭವಾಗುತ್ತದೆ. ಶ್ರಾವಣ ಮಾಸದಲ್ಲಿ ಬಾಳೆಹಣ್ಣಿಗೆ ಬೇಡಿಕೆ ಹೆಚ್ಚಾಗುತ್ತದೆ. ಆದರೆ ಈ ಬಾರಿ ಶ್ರಾವಣಕ್ಕೆ ಮೊದಲೇ ಬಾಳೆಹಣ್ಣಿನ ದರ ಬಲು ದುಬಾರಿಯಾಗಿದೆ.
ಶ್ರಾವಣ ಮಾಸಕ್ಕೂ ಮೊದಲೇ ಬಾಳೆಹಣ್ಣಿನ ದರ ಶತಕದ ಸಮೀಪಕ್ಕೆ ಬಂದಿದೆ. ಒಂದು ಕೆಜಿ ಏಲಕ್ಕಿ ಬಾಳೆಹಣ್ಣಿನ ದರ 100 ರೂ. ಗಡಿ ತಲುಪಿದೆ. ಕಳೆದ ತಿಂಗಳು 50 ರಿಂದ 55 ರೂ. ಇದ್ದ 1 ಕೆಜಿ ಬಾಳೆಹಣ್ಣಿನ ದರ 100 ರೂಪಾಯಿಗೆ ತಲುಪಿದೆ.
ಪಚ್ಚ ಬಾಳೆ ಹಣ್ಣಿನ ದರ 15 ರೂಪಾಯಿ ಜಾಸ್ತಿಯಾಗಿದೆ. ಶ್ರಾವಣ ಮಾಸದಲ್ಲಿ ಬೇಡಿಕೆ ಹೆಚ್ಚಾಗುವ ಕಾರಣ ಬಹುತೇಕ ಬೆಳೆಗಾರರು ಬಾಳೆ ಗೊನೆಗಳನ್ನು ಕಟಾವು ಮಾಡಿಸುತ್ತಿಲ್ಲ. ಭಾರಿ ಮಳೆಯ ಕಾರಣ ಕೊಳೆ ರೋಗ ಆವರಿಸಿದ್ದು ಇಳುವರಿ ಕುಂಠಿತವಾಗಿದೆ.
ಬಾಳೆಹಣ್ಣಿಗೆ ಬೇಡಿಕೆ ಹೆಚ್ಚಾಗುತ್ತಿದ್ದು ಒಂದು ಕೆಜಿ ಏಲಕ್ಕಿ ಬಾಳೆಗೆ 90 ರಿಂದ 100 ರೂಪಾಯಿವರೆಗೆ ಮಾರಾಟ ಮಾಡಲಾಗುತ್ತಿದೆ. ಪಚ್ಚ ಬಾಳೆ ಹಣ್ಣಿನ ದರ 45 ರೂ. ತಲುಪಿದ್ದು, ಚಂದ್ರಬಾಳೆ 67 ರೂ., ನೇಂದ್ರ ಬಾಳೆ 74 ರೂ., ರಸಬಾಳೆಗೆ 56 ರೂ.ವರೆಗೂ ದರ ಇದೆ.