alex Certify ಸಖತ್‌ ಕ್ಯೂಟ್‌ ಆಗಿದೆ ಪಾಸ್ ಪೋರ್ಟ್ ಫೋಟೋಗೆ ಪೋಸ್ ನೀಡಿದ ಪುಟ್ಟ ಬಾಲಕನ ಈ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಖತ್‌ ಕ್ಯೂಟ್‌ ಆಗಿದೆ ಪಾಸ್ ಪೋರ್ಟ್ ಫೋಟೋಗೆ ಪೋಸ್ ನೀಡಿದ ಪುಟ್ಟ ಬಾಲಕನ ಈ ವಿಡಿಯೋ

ಇಂಟರ್ನೆಟ್‌ನಲ್ಲಿ ದಿನನಿತ್ಯ ಹಲವಾರು ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಕೆಲವು ವಿಡಿಯೋಗಳು ಬಹಳ ಖುಷಿಕೊಡುತ್ತವೆ. ಅದರಲ್ಲೂ ಈ ಮಕ್ಕಳ ವಿಡಿಯೋಗಳನ್ನು ನೋಡುವುದೇ ಒಂದು ಅಂದ. ಹಾಗೆಯೇ ಇದೀಗ ವೈರಲ್ ಆಗಿರೋ ಪುಟ್ಟ ಪೋರನ ವಿಡಿಯೋ ನೋಡಿದ್ರೆ ನಿಮ್ಮ ಮೊಗದಲ್ಲೂ ನಗು ಮೂಡಬಹುದು.

ಹೌದು, ಪುಟ್ಟ ಬಾಲಕನೊಬ್ಬ ತನ್ನ ಪಾಸ್‌ಪೋರ್ಟ್ ಫೋಟೋ ಕ್ಲಿಕ್ಕಿಸಿಕೊಳ್ಳುವ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾಗಿದೆ. ಚಿಕ್ಕ ವಿಡಿಯೋದಲ್ಲಿ, ಬಾಲಕನೊಬ್ಬ ತನ್ನ ಪಾಸ್‌ಪೋರ್ಟ್ ಛಾಯಾಚಿತ್ರಕ್ಕಾಗಿ ಫೋಸ್ ನೀಡುತ್ತಿರುವುದನ್ನು ನೋಡಬಹುದು.

ಫೋಟೋ ಕ್ಲಿಕ್ಕಿಸುತ್ತಿದ್ದ ಛಾಯಾಗ್ರಾಹಕನಿಗೆ ಆ ಚಿತ್ರ ಎಷ್ಟು ಇಷ್ಟವಾಯಿತು ಅಂದರೆ, ಮುದ್ದಾಗಿ ಕಾಣುತ್ತಿದ್ದೀಯಾ. ಆದರೆ ನಿನ್ನ ಹಲ್ಲುಗಳನ್ನು ಮಾತ್ರ ತೋರಿಸಬೇಡ ಎಂದು ಕೇಳಿಕೊಂಡಿದ್ದಾನೆ.

ಆನ್‌ಲೈನ್‌ನಲ್ಲಿ ಹಂಚಿಕೊಂಡ ನಂತರ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು, 18.1 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ. ನೆಟ್ಟಿಗರು ಕಾಮೆಂಟ್ ವಿಭಾಗದಲ್ಲಿ ಪ್ರತಿಕ್ರಿಯೆಗಳ ಸುರಿಮಳೆಯನ್ನೇ ಸುರಿಸಿದ್ದಾರೆ.

https://youtu.be/bUteZCob27M

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...