ಜಿರಳೆ ಓಡಿಸುವುದು ಒಂದು ತಲೆ ನೋವಿನ ಕೆಲಸ. ಮನೆ ಎಷ್ಟೇ ಸ್ವಚ್ಛವಾಗಿದ್ದರೂ ಜಿರಳೆ ಕಾಟ ತಪ್ಪುವುದಿಲ್ಲ. ಆಹಾರದ ಮೇಲೆಲ್ಲ ಹರಿದಾಡುವ ಈ ಜಿರಳೆಗಳಿಂದ ಅತಿಸಾರ, ಅಸ್ತಮಾದಂತ ರೋಗಗಳು ಕಾಣಿಸಿಕೊಳ್ಳುತ್ತವೆ. ಮಾರುಕಟ್ಟೆಯಲ್ಲಿ ಜಿರಳೆ ಓಡಿಸಲು ಸಾಕಷ್ಟು ಔಷಧಿಗಳಿವೆ. ಆದ್ರೆ ಮನೆಯಲ್ಲಿರುವ ಪದಾರ್ಥಗಳನ್ನು ಬಳಸಿ ಸುಲಭವಾಗಿ ಜಿರಳೆಗಳನ್ನು ಓಡಿಸಬಹುದು.
ಎಲ್ಲರ ಮನೆಯಲ್ಲಿಯೂ ಲವಂಗ ಇದ್ದೇ ಇರುತ್ತದೆ. ಇದನ್ನು ಉಪಯೋಗಿಸಿ ನೀವು ಜಿರಳೆ ಓಡಿಸಬಹುದು. ಮನೆಯ ಯಾವ ಜಾಗದಲ್ಲಿ ಜಿರಳೆ ಇದೆಯೋ ಅಲ್ಲಿ ಲವಂಗವನ್ನಿಡಿ. ಅದರ ವಾಸನೆಗೆ ಜಿರಳೆ ಬರುವುದಿಲ್ಲ.
ಸೌತೆಕಾಯಿ ಕೂಡ ಜಿರಳೆಗೆ ಉತ್ತಮ ಮನೆ ಮದ್ದು. ಜಿರಳೆ ಬರುವ ಜಾಗದಲ್ಲಿ ಸೌತೆ ಕಾಯಿಯ ತುಂಡನ್ನು ಇಡಿ. ಅಪ್ಪಿ ತಪ್ಪಿಯೂ ಜಿರಳೆ ನಿಮ್ಮ ಮನೆಗೆ ಬರುವುದಿಲ್ಲ.
ದಾಲ್ಚಿನಿ ಎಲೆಗಳು ಕೂಡ ಜಿರಳೆ ಓಡಿಸುವ ಶಕ್ತಿಯನ್ನು ಹೊಂದಿವೆ. ಜಿರಳೆ ಹೊರ ಬರುವ ಸ್ಥಳದಲ್ಲಿ ದಾಲ್ಚಿನಿ ಎಲೆಗಳನ್ನು ಇಡಿ.
ಸೀಮೆ ಎಣ್ಣೆ ವಾಸನೆಗೆ ಜಿರಳೆ ಓಡಿ ಹೋಗುತ್ತೆ. ಹಾಗಾಗಿ ವಾರಕ್ಕೊಮ್ಮೆ ನೀರಿಗೆ ಸ್ವಲ್ಪ ಸೀಮೆ ಎಣ್ಣೆ ಬೆರೆಸಿ ಮನೆಯನ್ನು ಸ್ವಚ್ಛಗೊಳಿಸಿ.
ಬೆಳ್ಳುಳ್ಳಿ ಕೂಡ ಜಿರಳೆಯ ಶತ್ರು. ಹಾಗಾಗಿ ಜಿರಳೆ ಓಡಿಸಲು ನೀವು ಬೆಳ್ಳುಳ್ಳಿಯನ್ನು ಬಳಸಬಹುದು.