alex Certify 2100 ರ ವೇಳೆಗೆ 41 ಕೋಟಿಗೆ ಇಳಿಯಲಿದೆ ಭಾರತದ ಜನಸಂಖ್ಯೆ: ವಿಶ್ವಸಂಸ್ಥೆಯಿಂದ ಅಚ್ಚರಿಯ ಮಾಹಿತಿ ಬಹಿರಂಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

2100 ರ ವೇಳೆಗೆ 41 ಕೋಟಿಗೆ ಇಳಿಯಲಿದೆ ಭಾರತದ ಜನಸಂಖ್ಯೆ: ವಿಶ್ವಸಂಸ್ಥೆಯಿಂದ ಅಚ್ಚರಿಯ ಮಾಹಿತಿ ಬಹಿರಂಗ

ಜಗತ್ತಿನಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರೋ ರಾಷ್ಟ್ರಗಳಲ್ಲಿ ಭಾರತಕ್ಕೆ ಎರಡನೇ ಸ್ಥಾನವಿದೆ. ಚೀನಾ ಬಿಟ್ರೆ ಅತಿ ಹೆಚ್ಚು ಜನಸಂಖ್ಯೆ ಇರೋದು ಭಾರತದಲ್ಲೇ. ಆದ್ರೆ 2100 ವೇಳೆಗೆ ಅಂದ್ರೆ ಇನ್ನು 78 ವರ್ಷಗಳ ಬಳಿಕ ಭಾರತದ ಚಿತ್ರಣ ಸಂಪೂರ್ಣ ಬದಲಾಗಲಿದೆ. ಸಮೀಕ್ಷೆಯೊಂದರ ಪ್ರಕಾರ 2100 ವೇಳೆಗೆ ಭಾರತದ ಜನಸಂಖ್ಯೆ 41 ಕೋಟಿಗೆ ಇಳಿಕೆಯಾಗಲಿದೆಯಂತೆ.

ಜನಸಂಖ್ಯೆಯ ಬೆಳವಣಿಗೆ ಋಣಾತ್ಮಕವಾದಾಗ ಜ್ಞಾನ ಮತ್ತು ಜೀವನಮಟ್ಟ ಕೂಡ ನಿಶ್ಚಲವಾಗಿರುತ್ತದೆ, ಅದು ಕ್ರಮೇಣ ಕಣ್ಮರೆಯಾಗುತ್ತದೆ ಎಂಬುದು ಸ್ಟ್ಯಾನ್‌ಫೋರ್ಡ್ ಅಧ್ಯಯನದಲ್ಲಿ ಬಹಿರಂಗವಾಗಿದೆ. ಹಾಗಾಗಿ ಇದೊಂದು ಹಾನಿಕಾರಕ ಬೆಳವಣಿಗೆ ಎನ್ನುತ್ತಾರೆ ತಜ್ಞರು. ಮುಂಬರುವ ವರ್ಷಗಳಲ್ಲಿ ಭಾರತದ ಜನಸಂಖ್ಯಾ ಸಾಂದ್ರತೆ ಗಣನೀಯವಾಗಿ ಕುಸಿಯುತ್ತದೆ ಎಂದು ಅಂದಾಜಿಸಲಾಗಿದೆ. ಭಾರತ ಮತ್ತು ಚೀನಾದ ಜನಸಂಖ್ಯೆಯು ಈ ಕ್ಷಣದಲ್ಲಿ ಒಂದೇ ರೀತಿಯಾಗಿದ್ದರೂ ಅವುಗಳ ಸಾಂದ್ರತೆಯಲ್ಲಿ ಅಗಾಧ ವ್ಯತ್ಯಾಸವಿದೆ.

ಭಾರತದಲ್ಲಿ ಪ್ರತಿ ಚದರ ಕಿಲೋಮೀಟರ್‌ನಲ್ಲಿ ಸರಾಸರಿ 476 ಜನರು ವಾಸಿಸುತ್ತಿದ್ದರೆ, ಚೀನಾದಲ್ಲಿ ಪ್ರತಿ ಚದರ ಕಿಲೋಮೀಟರ್‌ನಲ್ಲಿ ನೆಲೆಸಿರುವುದು 148 ಜನರು ಮಾತ್ರ. 2100 ರ ವೇಳೆಗೆ ಭಾರತದ ಜನಸಂಖ್ಯಾ ಸಾಂದ್ರತೆಯು ಪ್ರತಿ ಚದರ ಕಿ.ಮೀ.ಗೆ 335 ವ್ಯಕ್ತಿಗಳಿಗೆ ಇಳಿಯುವ ನಿರೀಕ್ಷೆಯಿದೆ. ಭಾರತದ ಜನಸಂಖ್ಯಾ ಸಾಂದ್ರತೆಯ ಕುಸಿತವು ಇಡೀ ಪ್ರಪಂಚದ ಅಂದಾಜಿಗಿಂತಲೂ ಹೆಚ್ಚು ಎನ್ನಲಾಗ್ತಾ ಇದೆ. ಸದ್ಯ ಭಾರತದ ಜನಸಂಖ್ಯೆ 141.2 ಕೋಟಿ ಇದೆ. 2100 ರ ವೇಳೆಗೆ 100.3 ಕೋಟಿಯಷ್ಟು ಕಡಿಮೆಯಾಗುವ ನಿರೀಕ್ಷೆ ಇದೆ.

ವಿಶ್ವಸಂಸ್ಥೆಯ ಯೋಜನೆಗಳ ಜನಸಂಖ್ಯಾ ವಿಭಾಗದ ಇತ್ತೀಚಿನ ವರದಿಯಲ್ಲಿ ಈ ಬಗ್ಗೆ ಉಲ್ಲೇಖಿಸಲಾಗಿದೆ. ಚೀನಾ ಮತ್ತು ಅಮೆರಿಕದಂತಹ ಇತರ ದೇಶಗಳು ಸಹ ಇದೇ ರೀತಿಯ ಪ್ರವೃತ್ತಿಗೆ ಸಾಕ್ಷಿಯಾಗುವ ನಿರೀಕ್ಷೆಯಿದೆ. 2100 ರಲ್ಲಿ ಚೀನಾದ ಜನಸಂಖ್ಯೆ 49.4 ಕೋಟಿಗೆ ಕುಗ್ಗಬಹುದು. ಈ ಪ್ರಕ್ಷೇಪಣಗಳು ಕಡಿಮೆ ಫಲವತ್ತತೆ ದರದ ಸನ್ನಿವೇಶವನ್ನು ಆಧರಿಸಿವೆ. ಒಟ್ಟು ಫಲವತ್ತತೆಯು 2050ರ ವೇಳೆಗೆ 0.5 ಜನನಗಳಿಗಿಂತ ಕಡಿಮೆ ಇರುತ್ತದೆ. ಫಲವತ್ತತೆ ದರದಲ್ಲಿನ ಕುಸಿತದಿಂದಾಗಿ ಜನಸಂಖ್ಯೆಯಲ್ಲಿ ಕುಸಿತವನ್ನು ನಿರೀಕ್ಷಿಸಲಾಗಿದೆ.

ಭಾರತದ ಫಲವತ್ತತೆ ದರವು ಪ್ರತಿ ಮಹಿಳೆಗೆ 1.76 ಜನನಗಳಿಂದ 2032 ರಲ್ಲಿ 1.39ಕ್ಕೆ ಇಳಿಕೆಯಾಗಲಿದೆ. 2052 ರಲ್ಲಿ 1.28, 2082 ರಲ್ಲಿ 1.2 ಮತ್ತು 2100 ರಲ್ಲಿ 1.19 ಕ್ಕೆ ಇಳಿಯುವ ನಿರೀಕ್ಷೆಯಿದೆ. ದೇಶಗಳು ಶ್ರೀಮಂತವಾಗುತ್ತಿದ್ದಂತೆ, ಫಲವತ್ತತೆಯ ದರಗಳು ಸ್ಥಿರವಾದ ಜನಸಂಖ್ಯೆಯೊಂದಿಗೆ ಸ್ಥಿರವಾದ ಮಟ್ಟಕ್ಕೆ ಇಳಿಯುತ್ತವೆ. ಆಫ್ರಿಕನ್ ದೇಶಗಳು ಈ ಶತಮಾನದ ದ್ವಿತೀಯಾರ್ಧದಲ್ಲಿ ಜಾಗತಿಕ ಬೆಳವಣಿಗೆಯನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿರಬಹುದು. ಹೆಚ್ಚಿನ ಜಾಗತಿಕ ಪ್ರದೇಶಗಳ ಪ್ರಕ್ಷೇಪಣವು ಜನಸಂಖ್ಯೆಗೆ ನಕಾರಾತ್ಮಕ ನಿರೀಕ್ಷೆಯನ್ನು ತೋರಿಸುತ್ತದೆ. ಕಾಂಗೋ, ಈಜಿಪ್ಟ್, ಇಥಿಯೋಪಿಯಾ ಮತ್ತು ನೈಜೀರಿಯಾದಂತಹ ದೇಶಗಳು ಜನಸಂಖ್ಯೆಯ ಆಧಾರದಲ್ಲಿ ಬೆಳವಣಿಗೆ ಹೊಂದುತ್ತಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...