alex Certify ಸೌಂದರ್ಯವರ್ಧಕವಾಗಿ ‘ಕೊತ್ತಂಬರಿ ಸೊಪ್ಪು’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೌಂದರ್ಯವರ್ಧಕವಾಗಿ ‘ಕೊತ್ತಂಬರಿ ಸೊಪ್ಪು’

ಸಾರು, ಸಾಂಬಾರಿಗೆ ಮಾತ್ರವಲ್ಲ, ಕೊತ್ತಂಬರಿ ಸೊಪ್ಪು ಸೌಂದರ್ಯವರ್ಧಕವಾಗಿಯೂ ಕೆಲಸ ಮಾಡುತ್ತದೆ. ಚರ್ಮದ ಕಾಂತಿಗೆ ಕೊತ್ತಂಬರಿ ಸೊಪ್ಪನ್ನು ಹೇಗೆ ಬಳಸಬಹುದು ಅಂತ ನೀವೂ ತಿಳಿದುಕೊಳ್ಳಿ.

ಕೊತ್ತಂಬರಿ ಸೊಪ್ಪು – ಅಲೋವೆರಾ

ಕೊತ್ತಂಬರಿ ಸೊಪ್ಪನ್ನು ಅಲೋವೆರಾ ರಸದ ಜೊತೆ ಮಿಕ್ಸ್ ಮಾಡಿ ಪೇಸ್ಟ್ ಮಾಡಿಕೊಂಡು ಚರ್ಮಕ್ಕೆ ಹಚ್ಚಿಕೊಳ್ಳುವುದರಿಂದ ಚರ್ಮ ಸುಕ್ಕುಗಟ್ಟುವುದನ್ನು ತಡೆಯಬಹುದು.

ಕೊತ್ತಂಬರಿ ಸೊಪ್ಪು – ನಿಂಬೆ ಹಣ್ಣು

ಕೊತ್ತಂಬರಿ ಸೊಪ್ಪಿನ ಪೇಸ್ಟ್ ಗೆ ಕೊಂಚ ನಿಂಬೆ ರಸ ಸೇರಿಸಿಕೊಂಡು ಕಪ್ಪು ವರ್ತುಲಗಳಿರುವ ಕಡೆ ಹಚ್ಚಿಕೊಂಡರೆ ಚರ್ಮ ಕಾಂತಿಯುತವಾಗುತ್ತದೆ.

ಕೊತ್ತಂಬರಿ ಸೊಪ್ಪಿನ ಫೇಸ್ ಪ್ಯಾಕ್

ಕೊತ್ತಂಬರಿ ಸೊಪ್ಪಿನ ಪೇಸ್ಟ್ ಗೆ ಕೊಂಚ ಜೇನು ತುಪ್ಪ, ಹಾಲು ಮತ್ತು ನಿಂಬೆ ರಸ ಸೇರಿಸಿಕೊಂಡು ಮುಖಕ್ಕೆ ಹಚ್ಚಿಕೊಂಡರೆ ಚರ್ಮದ ಹೊಳಪು ಹೆಚ್ಚುತ್ತದೆ.

ಅಕ್ಕಿ ಮತ್ತು ಮಜ್ಜಿಗೆ ಜೊತೆ ಕೊತ್ತಂಬರಿ ಸೊಪ್ಪು

ಕೊತ್ತಂಬರಿ ಸೊಪ್ಪಿನ ಪೇಸ್ಟ್ ಗೆ ಅಕ್ಕಿ ಹಿಟ್ಟು ಮತ್ತು ಮಜ್ಜಿಗೆ ಸೇರಿಸಿಕೊಂಡು ಮುಖಕ್ಕೆ ಹಚ್ಚಿಕೊಂಡರೆ ಮುಖ ಫ್ರೆಶ್ ಆಗಿ ಕಾಣುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...