ಹೆಣ್ಣು ಮಕ್ಕಳಿಗೆ ಸೀರೆ ಎಂದರೆ ಬಲು ಇಷ್ಟ ಅನ್ನೋದು ಗೊತ್ತಿರೋದೆ. ದುಬಾರಿಯಾದರೂ ರೇಷ್ಮೆ ಸೀರೆ ಕೊಂಡು ಒಮ್ಮೆ ಉಪಯೋಗಿಸಿ ಹಾಗೇ ತೆಗೆದಿಡುತ್ತಾರೆ.
ಆದರೆ ವರುಷಗಳು ಕಳೆದ ಮೇಲೆ ಸೀರೆ ತನ್ನ ಮೊದಲಿನ ಸೊಬಗು ಕಳೆದುಕೊಳ್ಳುತ್ತದೆ. ಇದರಿಂದ ಮತ್ತೆ ಧರಿಸಲು ಮನಸ್ಸೇ ಆಗುವುದಿಲ್ಲ. ಹೀಗಾಗಿ ರೇಷ್ಮೆ ಸೀರೆಯನ್ನು ನಾಜೂಕಾಗಿ ಕಾಪಾಡಿಕೊಳ್ಳಲು ಇಲ್ಲಿದೆ ನೋಡಿ ಒಂದಷ್ಟು ಟಿಪ್ಸ್.
ಹತ್ತಿ ಬಟ್ಟೆಯಲ್ಲಿ ಸುತ್ತಿಡಿ
ಸೀರೆ ಹೊಸದರಂತೆ ಕಾಪಾಡಲು ಒಂದು ಅಗಲವಾದ ಹತ್ತಿ ಬಟ್ಟೆಯಲ್ಲಿ ಸೀರೆಯನ್ನು ಸುತ್ತಿ ಇಡಿ.
ಬಿಸಿಲಿಗೆ ಇಡಿ
ರೇಷ್ಮೆ ಸೀರೆಯನ್ನು ಅಗಾಗ ಬಿಸಿಲಿಗೆ ಹಾಕಿ ಒಣಗಿಸಬೇಕು. ಇದರಿಂದ ಸೀರೆಯ ಬಣ್ಣ ಹಾಗೆಯೇ ಉಳಿಯುತ್ತದೆ.
ಡ್ರೈ ಕ್ಲೀನ್ ಮಾಡಿಸಿ
ಸೀರೆಯನ್ನು ಎರಡು ಮೂರು ಬಾರಿ ಧರಿಸಿದ ನಂತರ ಡ್ರೈ ಕ್ಲೀನ್ ಮಾಡಿಸಿ. ಪ್ರತಿ ಬಾರಿ ಧರಿಸಿದ ನಂತರ ಡ್ರೈ ಕ್ಲೀನ್ ಮಾಡಿಸುವುದು ಸರಿಯಲ್ಲ.
ಸ್ಪ್ರೇಯನ್ನು ದೂರದಿಂದ ಬಳಸಿ
ಇನ್ನು ರೇಷ್ಮೆ ಸೀರೆಯ ಮೇಲೆ ಯಾವುದೇ ಬಾಡಿ ಸ್ಪ್ರೇ, ಪರ್‌ಫ್ಯೂಮ್ ಅಥವಾ ಡಿಯೋಡ್ರಂಟ್ ಬಳಕೆ ಮಾಡಬೇಡಿ.
ಶ್ಯಾಂಪೂವಿನಿಂದ ತೊಳೆಯಿರಿ
ಸೀರೆಯಲ್ಲಿ ಕಲೆಗಳಾದರೆ ಸಾಬೂನಿನಿಂದ ತೊಳೆಯಬೇಡಿ. ಶಾಂಪೂವಿನಿಂದ ತೊಳೆಯಿರಿ.
ಆಗಾಗ ಮಡಚಿ
ಒಂದೇ ಭಂಗಿಯಲ್ಲಿ ಸೀರೆಯನ್ನು ಮಡಚಿ ಇಡಬೇಡಿ. ಬದಲಾಗಿ ಅದನ್ನು ಆಗಾಗ ಬಿಡಿಸಿ ಬೇರೆ ರೀತಿಯಾಗಿ ಮಡಚಿ. ಇದರಿಂದ ಸೀರೆ ಹಾಳಾಗದಂತೆ ಕಾಪಾಡಬಹುದು.