ಯುನೈಟೆಡ್ ಕಿಂಗ್ಡಂನಲ್ಲೀಗ ಹೀಟ್ ವೇವ್ನದ್ದೇ ಚರ್ಚೆ. ಏಕೆಂದರೆ ಹಲವು ಸ್ಥಳಗಳಲ್ಲಿ ಈ ವಾರದ ಆರಂಭದಲ್ಲಿ ಮೊದಲ ಬಾರಿಗೆ 40 ಡಿಗ್ರಿ ಸೆಲ್ಸಿಯಸ್ಗಿಂತ ಹೆಚ್ಚಿನ ತಾಪಮಾನ ದಾಖಲಾಗಿದೆ.
ಯುಕೆ ಸುತ್ತಮುತ್ತಲಿನ ಜನರು ಶಾಖದ ಅಲೆ ನಿಭಾಯಿಸಲು ಪ್ರಯತ್ನಿಸುತ್ತಿರುವಾಗ, ದೇಶದ ಜನಪ್ರಿಯ ಚಾನೆಲ್ನಲ್ಲಿ ಶಾಖದ ತೀವ್ರತೆ ಕುರಿತು ಪ್ರಸಾರವಾದ ಕಾರ್ಯಕ್ರಮವು ಟೀಕೆಗೆ ಒಳಗಾಯಿತು.
ಜೂನ್ 14 ರಂದು ಜಿಬಿ ನ್ಯೂಸ್ನಲ್ಲಿ ಬೆಳಗಿನ ಶೋ ʼಟು ದಿ ಪಾಯಿಂಟ್ʼನಲ್ಲಿ ಪ್ರಸಾರವಾದ ಸುದ್ದಿಯಲ್ಲಿ ಕಾರ್ಯಕ್ರಮ ನಿರ್ವಾಹಕರು ಹವಾಮಾನಶಾಸ್ತ್ರಜ್ಞ ಜಾನ್ ಹ್ಯಾಮಂಡ್ ಅವರನ್ನು ʼಎಂಜಾಯಿಂಗ್ ದಿ ಸನ್ಶೈನ್’ ಎಂದು ಕೇಳುತ್ತಾರೆ.
ಇದಕ್ಕೆ ಉತ್ತರಿಸಿದ ಹ್ಯಾಮಂಡ್, ಹವಾಮಾನವು ಆಹ್ಲಾದಕರವಾಗಿ ಕಂಡುಬಂದರೂ ಕೆಲವೇ ದಿನಗಳಲ್ಲಿ ತಾಪಮಾನವು 40 ಡಿಗ್ರಿ ತಲುಪುವ ನಿರೀಕ್ಷೆಯಿದೆ. ಮುಂಬರುವ ಹೀಟ್ವೇವ್ನ ಬಗ್ಗೆ ಪ್ರತಿಪಾದಿಸುತ್ತಾ, “ಮುಂದಿನ ವಾರದ ಆರಂಭದಲ್ಲಿ ನೂರಾರು ಸಾವುಗಳು ಸಂಭವಿಸಬಹುದು ಎಂದು ನಾನು ಭಾವಿಸುತ್ತೇನೆ. ನನ್ನ ಮುಂದಿರುವ ಚಾರ್ಟ್ಗಳು ಭಯಾನಕವಾಗಿ ಕಾಣುತ್ತಿವೆ, ಆದ್ದರಿಂದ ನಾವೆಲ್ಲರೂ ಉತ್ತಮ ಹವಾಮಾನ ಎದುರು ನೋಡುತ್ತಿದ್ದೇವೆ ಎಂದರು.
ಈ ಎಚ್ಚರಿಕೆಯ ಮಾತುಗಳ ಹೊರತಾಗಿಯೂ, ಕಾರ್ಯಕ್ರಮದ ಹೋಸ್ಟ್ ಆ ಹವಾಮಾನಶಾಸ್ತ್ರಜ್ಞರ ಮಾತಿಗೆ ತಡೆ ಹಾಕಿ ಹವಾಮಾನದಿಂದ ನಾವು ಸಂತೋಷವಾಗಿರಬೇಕೆಂದು ಬಯಸುತ್ತೇನೆ. ನಿಮ್ಮೆಲ್ಲರನ್ನು ಸ್ವಲ್ಪಮಟ್ಟಿಗೆ ಗಾಬರಿ ಮಾಡಿಸಿದ ಹವಾಮಾನಶಾಸ್ತ್ರಜ್ಞರಿಗೆ ಏನಾದರೂ ಸಂಭವಿಸಿದೆಯೇ ಎಂದು ನನಗೆ ತಿಳಿದಿಲ್ಲ ಎಂದು ಹೇಳಿದ್ದಲ್ಲದೇ, “ನಾವು ಯಾವಾಗಲೂ ಬಿಸಿ ವಾತಾವರಣವನ್ನು ಹೊಂದಿದ್ದೇವೆ ಮತ್ತು 76 ರ ಬೇಸಿಗೆಯಲ್ಲಿ ಬಿಸಿಯಾಗಿರಲಿಲ್ಲವೇ?’ ಎಂದು ಪುನಃ ಪ್ರಶ್ನೆ ಹಾಕುತ್ತಾಳೆ.
ಅದಕ್ಕೆ ಉತ್ತರ ನೀಡಿದ ಹ್ಯಾಮಂಡ್, 1976ರ ಬೇಸಿಗೆಯಲ್ಲಿ ಹೀಟ್ವೇವ್ ಒಂದು ಕೆಟ್ಟ ಘಟನೆಯಾಗಿದೆ. “ಮುಂದಿನ ವಾರದಲ್ಲಿ ಶಾಖದಿಂದಾಗಿ ಅನೇಕರು ಸಾಯುತ್ತಾರೆ ಎಂಬ ಅಂಶದ ಬಗ್ಗೆ ನಾವು ತುಂಬಾ ಹಗುರವಾಗಿ ಪರಿಗಣಿಸಬಾರದು ಎಂದು ನಾನು ಭಾವಿಸುತ್ತೇನೆ. ಎಂದರು.
ಈ ಕಾರ್ಯಕ್ರಮದ ವಿಡಿಯೋ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅನೇಕರು ಅದನ್ನು ಡೋಂಟ್ ಲುಕ್ ಅಪ್ ಚಲನಚಿತ್ರಕ್ಕೆ ಸಂಬಂಧಿಸಿದೆ ಎಂದಿದ್ದಾರೆ. ಆ ಚಿತ್ರದಲ್ಲಿ ಇಬ್ಬರು ಖಗೋಳಶಾಸ್ತ್ರಜ್ಞರನ್ನು ಟಿವಿ ಹೋಸ್ಟ್ಗಳು ಹೊರಕಳಿಸಿದ್ದರು. ಈ ಕ್ಲಿಪ್ ಮೂಲಕ “ಡೋಂಟ್ ಲುಕ್ ಅಪ್’ ಟ್ರೆಂಡ್ ಕೂಡ ಆಯಿತು.
https://twitter.com/cs1891/status/1549769261895368705?ref_src=twsrc%5Etfw