ಆಷಾಢ ಮುಗಿಯುತ್ತಾ ಬಂದಿದೆ. ಶ್ರಾವಣ ಆರಂಭವಾಗಲು ಇನ್ನೇನು ಕೆಲವೇ ದಿನಗಳಷ್ಟೇ ಬಾಕಿ ಇದೆ. ಶ್ರಾವಣದ ಬೆನ್ನಲ್ಲೇ ಸಾಲು ಸಾಲು ಹಬ್ಬಗಳು ಬರಲಿದ್ದು, ಶುಭ ಸಮಾರಂಭಗಳನ್ನು ನಡೆಸಲು ಸಹ ಇದು ಸಕಾಲ.
ಹೀಗಾಗಿ ಈ ಸಂದರ್ಭದಲ್ಲಿ ಚಿನ್ನಾಭರಣ ಖರೀದಿಸಲು ಬಹುತೇಕರು ಮುಂದಾಗುತ್ತಾರೆ. ಆದರೆ ಶುಕ್ರವಾರದಂದು ಚಿನ್ನದ ದರದಲ್ಲಿ ಏರಿಕೆ ಕಂಡು ಬಂದಿದ್ದು, ಹತ್ತು ಗ್ರಾಂ ಚಿನ್ನದ ಬೆಲೆ 594 ರೂಪಾಯಿ ಹೆಚ್ಚಳವಾಗುವ ಮೂಲಕ 50,341 ರೂಪಾಯಿ ತಲುಪಿದೆ.
ಇನ್ನು ಬೆಳ್ಳಿ ಬೆಲೆಯಲ್ಲೂ ಸಹ ಏರಿಕೆಯಾಗಿದ್ದು, ಕೆಜಿಗೆ 998 ರೂಪಾಯಿ ಹೆಚ್ಚಳವಾಗುವ ಮೂಲಕ ಪ್ರತಿ ಕೆಜಿ ಬೆಲೆ 55,164 ರೂಪಾಯಿ ತಲುಪಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ – ಬೆಳ್ಳಿ ಬೆಲೆ ಏರಿಕೆ ಆಗಿರುವುದರಿಂದ ದೇಶಿಯ ಮಾರುಕಟ್ಟೆಯಲ್ಲೂ ಹೆಚ್ಚಳವಾಗಿದೆ ಎಂದು ಹೇಳಲಾಗಿದೆ.