ಬೆಂಗಳೂರು: ಸಣ್ಣ ಮತ್ತು ಮಧ್ಯಮ ಕಾಫಿ ಬೆಳೆಗಾರರು ಬಳಕೆ ಮಾಡುವ 10 ಹೆಚ್.ಪಿ. ವರೆಗಿನ ನೀರಾವರಿ ಪಂಪ್ ಸೆಟ್ ಗಳ ವಿದ್ಯುತ್ ವೆಚ್ಚ ಮರುಪಾವತಿಗೆ ಸರ್ಕಾರ ಆದೇಶ ಹೊರಡಿಸಿದೆ. ಕಾಫಿ ಬೆಳೆಗಾರರಿಗೆ 10 ಹೆಚ್.ಪಿ.ವರೆಗೆ ವಿದ್ಯುತ್ ಬಳಕೆಯ ಶುಲ್ಕವನ್ನು ಸರ್ಕಾರವೇ ಫಲಾನುಭವಿಗಳ ಖಾತೆಗೆ ನೇರವಾಗಿ ಪಾವತಿ ಮಾಡಲು ತೀರ್ಮಾನಿಸಿದೆ.
ರೈತರಿಗೆ ಕೃಷಿ ಪಂಸೆಟ್ ಗಳಿಗೆ 10 ಹೆಚ್.ಪಿ.ವರೆಗೆ ವಿದ್ಯುತ್ ಸರಬರಾಜು ಉಚಿತವಾಗಿ ನೀಡುತ್ತಿದ್ದು, ಇದೇ ಮಾದರಿಯಲ್ಲಿ ಕಾಫಿ ಬೆಳೆಗಾರರಿಗೂ ಜುಲೈ 1 ರಿಂದ ಅನ್ವಯವಾಗುವಂತೆ 10 ಹೆಚ್.ಪಿ.ವರೆಗೆ ನೀರಾವರಿ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್ ನೀಡಲಾಗುವುದು.
ಫಲಾನುಭವಿಗಳು ಸಣ್ಣ ಮತ್ತು ಮಧ್ಯಮ ಕಾಫಿ ಬೆಳೆಗಾರರಾದ ಬಗ್ಗೆ ದೃಢೀಕರಣ ನೀಡಬೇಕು. ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆಯ ವಿವರ ಒದಗಿಸಬೇಕು. ಬೆಳೆಗಾರರ ಒಂದು ಸ್ಥಾವರಕ್ಕೆ ಮಾತ್ರ ಸೌಲಭ್ಯ ಲಭ್ಯವಿದ್ದು, ವಿದ್ಯುತ್ ಬಳಕೆಯ ಶುಲ್ಕವನ್ನು ಸರ್ಕಾರವೇ ಫಲಾನುಭವಿಗಳ ಖಾತೆಗೆ ಡಿಬಿಟಿ ಮೂಲಕ ಪಾವತಿ ಮಾಡಲಿದೆ.