ಆಸ್ಟ್ರೆಲಿಯಾದ ಪರ್ಥ್ನ ಅನ್ನಾ ಮತ್ತು ಲೂಸಿ ಡಿಸಿಂಕ್ ಅವಳಿ- ಜವಳಿ. ಇವರಿಬ್ಬರ ಟೇಸ್ಟ್ ಈಗ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆಯುವ ವಿಷಯವಾಗಿದೆ.
ಅವರಿಬ್ಬರು ಈ ಹಿಂದೆ ಬೆನ್ ಬೈರ್ನೆ ಎಂಬಾತನ ಜೊತೆ ಡೇಟಿಂಗ್ ನಡೆಸಿ ಅವನನ್ನು ಮದುವೆಯಾಗಲು ಸಹ ಉದ್ದೇಶಿಸಿದ್ದರು. ಎರಡು ವರ್ಷಗಳ ನಂತರ ಅದೇ ವ್ಯಕ್ತಿಯಿಂದ ಗರ್ಭಿಣಿಯಾಗುವುದು ಅವರ ಉದ್ದೇಶ. ಈ ವಿಷಯ ಚರ್ಚಿಸಿದ ನಂತರ ಅವರು ಅಂದೇ ವೈರಲ್ ಆಗಿದ್ದರು.
ಅವರು ತಮ್ಮ ಮಹತ್ವಾಕಾಂಕ್ಷೆಗಳನ್ನು ಕ್ಯಾಮರಾ ಮುಂದೆ ಚರ್ಚಿಸಿದ್ದರು, ದಂಪತಿ ಮಗುವಿಗೆ ಪ್ರಯತ್ನಿಸಲು ಐಎಫ್ವಿ ಬಳಸುವ ಉದ್ದೇಶವನ್ನು ಸಹ ಘೋಷಿಸಿದ್ದರಯ.
ಈಗ ಅವರು ಪುನಃ ಮುನ್ನೆಲೆಗೆ ಬಂದಿದ್ದು, ಅನ್ನಾ ಮತ್ತು ಲೂಸಿ ಡಿಂಕೆ ಇತ್ತೀಚೆಗೆ 36 ವರ್ಷಕ್ಕೆ ಕಾಲಿಟ್ಟಿದ್ದಾರೆ. ಇಬ್ಬರು ತಮ್ಮ ಪ್ರಿಯತಮ ಬೆನ್ ಜೊತೆ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಇಬ್ಬರೂ ಒಂದೇ ರೀತಿಯ ಕೇಶವಿನ್ಯಾಸ, ಮೇಕಪ್, ಒಂದೇ ರೀತಿಯ ಉಡುಪು ಧರಿಸಿರುವ ಫೋಟೋ ವೈರಲ್ ಆಗಿದೆ.
ಅವರೀಗ ಅವಳಿ ಮಕ್ಕಳನ್ನು ಹೊಂದಲು ಉತ್ಸುಕರಾಗಿದ್ದು ಈ ಸಂಗತಿಯನ್ನು ಅವರೇ ಹೇಳಿದ್ದಾರೆ. ಟಿಎಲ್ಸಿ ಟಿವಿ ಚಾನಲ್ನ ಎಕ್ಟ್ರೀಮ್ ಸಿಸ್ಟರ್ಸ್ ಕಾರ್ಯಕ್ರಮದಲ್ಲಿ ತಮ್ಮ ಗುಟ್ಟುಗಳನ್ನು ಬಹಿರಂಗಮಾಡಿದ್ದಾರೆ.
ಟಿವಿಯ ಡಾಕ್ಯುಮೆಂಟರಿಯಲ್ಲಿ ಸಹೋದರಿಯರು ಗರ್ಭಧಾರಣೆಯ ಪರೀಕ್ಷೆಗೆ ಒಡ್ಡಿಕೊಂಡಿದ್ದಾರೆ. ಆದರೆ ಫಲಿತಾಂಶವು ನಿರಾಶಾದಾಯಕವಾಗಿತ್ತು. ಅವರ ಮುಂದಿನ ಹುಟ್ಟುಹಬ್ಬದ ಸಂದರ್ಭದಲ್ಲಿ ಅವಳಿ ಮಕ್ಕಳನ್ನು ಹೊಂದುವ ಪ್ರಯತ್ನವನ್ನು ಮುಂದುವರಿಸುವುದಾಗಿ ಹೇಳಿದ್ದಾರೆ.
ವರದಿಗಳ ಪ್ರಕಾರ, ಬೆನ್ ಕಳೆದ ವರ್ಷ ಸಹೋದರಿಯರಿಗೆ ಮದುವೆಯಾಗುವುದಾಗಿ ಪ್ರಸ್ತಾಪಿಸಿದ್ದರು, ಆದರೆ ಆಸ್ಟ್ರೇಲಿಯಾದಲ್ಲಿ ಬಹುಪತ್ನಿತ್ವ ಕಾನೂನುಬಾಹಿರವಾಗಿರುವುದರಿಂದ, ಇನ್ನೂ ಮದುವೆಯಾಗಿಲ್ಲ ಎಂಬುದು ಕೊನೆಯ ಟ್ವಿಸ್ಟ್.