ಬೆಂಗಳೂರು: ರಾಜ್ಯದ ಎಲ್ಲಾ ನಗರ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಎ ಮತ್ತು ಬಿ ಪ್ರವರ್ಗದಲ್ಲಿ ಬರುವ ಒಬಿಸಿಗೆ ಮೂರನೇ ಒಂದು ಭಾಗ ಅಥವಾ ಶೇಕಡ 33 ರಷ್ಟು ಮೀಸಲಾತಿ ನೀಡುವ ಬಗ್ಗೆ ನ್ಯಾಯಮೂರ್ತಿ ಭಕ್ತವತ್ಸಲ ನೇತೃತ್ವದ ಆಯೋಗ ಶಿಫಾರಸು ಮಾಡಿದೆ.
ಸರ್ಕಾರಕ್ಕೆ ಈ ಕುರಿತು ಸಲ್ಲಿಸಲಾದ ವರದಿಯಲ್ಲಿ ಪೌರ ಸಂಸ್ಥೆಗಳಲ್ಲಿ ಒಬಿಸಿಗೆ ಶೇಕಡ 33ರಷ್ಟು ಮೀಸಲಾತಿಗೆ ಶಿಫಾರಸು ಮಾಡಲಾಗಿದ್ದು, ಇಂದು ಸುಪ್ರೀಂ ಕೋರ್ಟ್ ಗೆ ವರದಿ ಸಲ್ಲಿಸುವ ಸಾಧ್ಯತೆ ಇದೆ.
ವರದಿ ಸ್ವೀಕರಿಸಿದ ಸರ್ಕಾರ ಸಂಪುಟದಲ್ಲಿ ಒಪ್ಪಿಗೆ ಪಡೆದು ಸುಪ್ರೀಂ ಕೋರ್ಟ್ ಗೆ ಸಲ್ಲಿಸಲಿದೆ. ಇದರಿಂದಾಗಿ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಇದ್ದ ಅಡೆ-ತಡೆ ನಿವಾರಣೆಯಾದಂತಾಗಿದೆ ಎಂದು ಹೇಳಲಾಗಿದೆ.